ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಜನಗಣತಿ ಕಾರ್ಯ ಒಂದು ಹಬ್ಬವಿದ್ದಂತೆ. ಡಿಜಿಟಲ್ ಮಾದರಿ ಜನಗಣತಿ ಕಾರ್ಯ ಮಾಡುವ ಮೂಲಕ ಶಿಕ್ಷಕರು ಉತ್ತಮ ಕರ್ತವ್ಯದೊಂದಿಗೆ ಹಬ್ಬದಂತೆ ಯಶಸ್ವಿಗೊಳಿಸಬೇಕು ಎಂದು ತಹಶಿಲ್ದಾರ ಸುರೇಶ ಚವಲರ ಹೇಳಿದರು.
ಪಟ್ಟಣದ ಎ.ಬಿ.ಜತ್ತಿ ಪದವಿಪೂರ್ವ ಮಹಾವಿಧ್ಯಾಲಯದಲ್ಲಿ ತಾಲ್ಲೂಕ ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಯೋಗದಲ್ಲಿ ಭಾರತದ ಜನಗಣತಿ 2027 ನಿಮಿತ್ಯ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಮಂಗಳವಾರ ನಡೆದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸತ್ತಾರೆ ಎಂಬ ವಿಶ್ವಾಸವಿದೆ. ನಿಗದಿಪಡಿಸಿದ ನಕ್ಷೆಯನ್ನು ತಯಾರಿಸಿಕೊಂಡರೆ ಮೊದಲ ಹಂತದ ಮನೆಗಳ ಪಟ್ಟಿ ಕಾರ್ಯ ಮಾಡಲು ಸುಲಭವಾಗುತ್ತದೆ. ಭಾರತದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ತಿಳಿಯಲು ಜನಗಣತಿಯೇ ಮೂಲ ಆಧಾರವಾಗಿರುತ್ತದೆ. ಆದ್ದರಿಂದ ಪರಿಪೂರ್ಣ ಮಾಹಿತಿಯೊಂದಿಗೆ ಕರ್ತವ್ಯ ನಿರ್ವಹಿಸಿ ಗಣತಿ ಕಾರ್ಯ ಯಶಸ್ವಿಯಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಘು ನಡುವಿನಮನಿ, ಉಪತಹಶಿಲ್ದಾರ ಎಚ್.ಎನ್.ಬಡಿಗೇರ, ಎಸ್.ಬಿ.ಬಿರಾದರ, ಅನೀಲ ಕೊಟ್ಯಾಳ, ಪ್ರವೀಣ ಬಸರಕೋಡ, ಸಂತೋಷ ಹೆಗಡೆ, ರಮೇಶ ಚವ್ಹಾಣ ಇದ್ದರು.

