ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಾಜದ ಹಿರಿಯ ವ್ಯಕ್ತಿಯನ್ನು ಗುರುತಿಸಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸರಕಾರಕ್ಕೆ ಮತ್ತು ಸಿಂದಗಿ ಶಾಸಕರಿಗೆ ಅಭಿನಂದನೆಗಳು ಎಂದು ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಶಿವಾಜಿ ಮೇಟಗಾರ ಹೇಳಿದರು.
ಸಿಂದಗಿ ನಗರದ ಮರಗಮ್ಮ ಲಕ್ಕಮ್ಮ ದೇವಸ್ಥಾನದಲ್ಲಿ ನೂತನವಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಹಣಮಂತ ಸುಣಗಾರ ಅವರಿಗೆ ತಳವಾರ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನಿಸಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಧನೆ ಮಾಡಿದ ಸಾಧಕರಿಗೆ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಸನ್ಮಾನವನ್ನು ಸ್ವೀಕರಿಸಿದ ನೂತನ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಪಕ್ಷ ಹಾಗೂ ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಪಕ್ಷದ ಹಿರಿಯರು, ಸಿಎಂ, ಡಿಸಿಎಂ ಹಾಗೂ ಸಚಿವರು ನನ್ನನ್ನು ಈ ಹುದ್ದೆಗೆ ನೇಮಕವಾಗಲು ಸಹಕರಿಸಿದ್ದಾರೆ. ಹಿರಿಯರು ಹಾಗೂ ಸಾರ್ವಜನಿಕರು ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ವೇಳೆ ಎಸ್.ಎಂ.ಬಿರಾದಾರ, ಭೀಮರಾಯ ಯಾತನೂರ, ಪರಶುರಾಮ ಗೂಳುರ, ಶರಣಪ್ಪ ಸುಂಗಠಾಣ, ಲಕ್ಕಮ್ಮ ಬಿರಾದಾರ, ರವಿ ವಾಲೀಕಾರ, ಬಸು ಪಡಗಾನೂರ, ಶ್ರೀಶೈಲ ಹೂರಕ್ಕೆರಿ, ರಾಜು ಕುರಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

