Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಹಿರಂಗ ಚರ್ಚೆಗೆ ನಾವ್ ರೆಡಿ: ಕಾಂಗ್ರೆಸ್ ಗೆ ಜೆಡಿಎಸ್ ನಾಯಕರ ಸವಾಲ್

ಹಸಿರುಕ್ರಾಂತಿಯಿಂದ ಆಹಾರ ಭದ್ರತೆಗೆ ಬುನಾದಿ ಹಾಕಿದ ಬಾಬುಜಿ

ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು‌ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಬಡ್ಡಿ ಎರಡು ತಂಡಗಳ ನಡುವಿನ ಸಂಪರ್ಕದ ಕ್ರೀಡೆ :ಡಾ.ರವಿ ಗೋಲಾ
(ರಾಜ್ಯ ) ಜಿಲ್ಲೆ

ಕಬಡ್ಡಿ ಎರಡು ತಂಡಗಳ ನಡುವಿನ ಸಂಪರ್ಕದ ಕ್ರೀಡೆ :ಡಾ.ರವಿ ಗೋಲಾ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕಬ್ಬಡ್ಡಿಯು ೪೦೦೦ ವರ್ಷಗಳಷ್ಟು ಪುರಾತನವಾದ ಮತ್ತು ನಮ್ಮ ದೇಶದ ಗ್ರಾಮೀಣ ಕ್ರೀಡೆಯಾಗಿದೆ. ಇದು ಎರಡು ತಂಡಗಳ ನಡುವಿನ ಸಂಪರ್ಕದ ಕ್ರೀಡೆಯಾಗಿದೆ. ಈ ಕ್ರೀಡೆಯು ನಮ್ಮ ದೇಶಕ್ಕೆ ಹೆಗ್ಗಳಿಕೆಯನ್ನು ತಂದು ಕೊಟ್ಟಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಕ್ರೀಡಾಸಕ್ತಿ ಮತ್ತು ಸ್ಪೂರ್ತಿಯೊಂದಿಗೆ ಆಟವಾಡಬೇಕು ಎಂದು ಡಾ.ರವಿ ಗೋಲಾ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎರಡನೇಯ ವಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೈಹಿಕ ಸಾಮರ್ಥ್ಯವಿದ್ದರೆ ಮಾತ್ರ ಬೌದ್ಧಿಕತೆ ಬೆಳೆಯುವುದು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಮಾತ್ರ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಗೊಳಿಸುತ್ತದೆ. ಆದ್ದರಿಂದ ಸದೃಢ ಆರೋಗ್ಯಕ್ಕಾಗಿ ಯಾವುದಾದರೊಂದು ಆಟವನ್ನು ಸದಾ ಆಡಲೇಬೇಕು. ಅದರಲ್ಲೂ ನಮ್ಮ ಗ್ರಾಮೀಣ ಮತ್ತು ಗಂಡು ಮೆಟ್ಟಿನ ನಾಡಿನ ಪ್ರಬಲ ಆಟವಾದ ಕಬ್ಬಡ್ಡಿಯನ್ನು ಆಡುತ್ತಾ, ಮುಂದಿನ ಯುವ ಜನಾಂಗಕ್ಕಾಗಿ ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದರು.
ಇನ್ನೊರ್ವ ಅತಿಥಿ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡಿ, ಇಂದಿನ ಒತ್ತಡಮಯ ಮತ್ತು ಸಂಘರ್ಷಮಯವಾದ ಬದುಕಿನಲ್ಲಿ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಯೋಗ, ಧ್ಯಾನ, ವ್ಯಾಯಾಮ, ದೈಹಿಕ ಕಸರತ್ತು ಮತ್ತು ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್.ಎಸ್.ಕುರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸಂಗಮೇಶ ಗುರವ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಡಾ. ಶಿವಾನಂದ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸುನೀಲ ಹತ್ತಿ ಅತಿಥಿಗಳ ಪರಿಚಯಿಸಿದರು. ಪ್ರೊ. ಎಂ.ಎಸ್.ಖೊದ್ನಾಪೂರ ವಂದಿಸಿದರು.
ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು ೬ ತಂಡಗಳು ಭಾಗವಹಿಸಿದ್ದವು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಹಿರಂಗ ಚರ್ಚೆಗೆ ನಾವ್ ರೆಡಿ: ಕಾಂಗ್ರೆಸ್ ಗೆ ಜೆಡಿಎಸ್ ನಾಯಕರ ಸವಾಲ್

ಹಸಿರುಕ್ರಾಂತಿಯಿಂದ ಆಹಾರ ಭದ್ರತೆಗೆ ಬುನಾದಿ ಹಾಕಿದ ಬಾಬುಜಿ

ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು‌ ಮನವಿ

ಗ್ರಾಮ ಒನ್ ಫ್ರಾಂಚೈಸಿಗೆ ಆನ್ ಲೈನ್ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಹಿರಂಗ ಚರ್ಚೆಗೆ ನಾವ್ ರೆಡಿ: ಕಾಂಗ್ರೆಸ್ ಗೆ ಜೆಡಿಎಸ್ ನಾಯಕರ ಸವಾಲ್
    In (ರಾಜ್ಯ ) ಜಿಲ್ಲೆ
  • ಹಸಿರುಕ್ರಾಂತಿಯಿಂದ ಆಹಾರ ಭದ್ರತೆಗೆ ಬುನಾದಿ ಹಾಕಿದ ಬಾಬುಜಿ
    In (ರಾಜ್ಯ ) ಜಿಲ್ಲೆ
  • ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು‌ ಮನವಿ
    In (ರಾಜ್ಯ ) ಜಿಲ್ಲೆ
  • ಗ್ರಾಮ ಒನ್ ಫ್ರಾಂಚೈಸಿಗೆ ಆನ್ ಲೈನ್ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬುದ್ಧ-ಬಸವ-ಅಂಬೇಡ್ಕರ್ ಪುಸ್ತಕ ಮೇಳಕ್ಕೆ ಭರದ ಸಿದ್ಧತೆ
    In (ರಾಜ್ಯ ) ಜಿಲ್ಲೆ
  • ೬ ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ೩ ತಿಂಗಳಲ್ಲಿ ಪೂರ್ಣ
    In (ರಾಜ್ಯ ) ಜಿಲ್ಲೆ
  • ನಾಡು-ದೇಶದ ಹಿತಕ್ಕಾಗಿ ಹಗಲಿರುಳು ಶ್ರಮಿಸುವ ಬಿಜೆಪಿ :ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಸರಾಫ ವರ್ತಕರ ಮೇಲೆ ಪೊಲೀಸ್ ಕಿರುಕುಳ ಖಂಡಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸಕಲೇಶಪುರದಲ್ಲಿ ಫೋಟೋಗ್ರಾಫರ್ ಮೇಲಿನ ಹಲ್ಲೆ ಖಂಡಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಏ.೮ ರಂದು ಸಚಿವ ಎಂ.ಬಿ.ಪಾಟೀಲ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.