ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮೊಬೈಲ್ ಟವರ್ ಅಳವಡಿಕೆ ಕಾಮಗಾರಿಯನ್ನು ತಕ್ಷಣ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಇಲ್ಲಿನ ಗಣೇಶ ನಗರದ ಹುನಗುಂದ ಲೇಔಟ್ ನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿದರು.
ಇಲ್ಲಿನ ಸರ್ವೇ ನಂ ೭೮ ರಲ್ಲಿ ಹಲವು ಮನೆಗಳು ನಿರ್ಮಾಣಗೊಂಡಿದ್ದು, ಸಾಕಷ್ಟು ಕುಟುಂಬಗಳು ವಾಸವಾಗಿವೆ. ಇಲ್ಲಿ ಟವರ್ ನಿರ್ಮಿಸುವದರಿಂದ ಅಲ್ಲಿಂದ ಬಿಡುಗಡೆಯಾಗುವ ವಿಕಿರಣದಿಂದ ಬಡಾವಣೆಯಲ್ಲಿ ವಾಸವಾಗಿರುವ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುವದರಿಂದ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪತ್ರಕ್ಕೆ ಎಸ್.ಎಸ್.ಚಿನಿವಾರ, ಎಂ.ಎಸ್.ಯರಗಲ್ಲ, ಕೆ.ಎಂ.ಲಮಾಣಿ, ಬಿ.ಎಂ.ಪತ್ತಾರ, ಜಿ.ಎಚ್.ಚೌವ್ಹಾಣ, ಆರ್.ಸಿ.ಹುನಗುಂದ, ಡಾ.ರಂಗನಾಥ ವೈದ್ಯ, ಶಿವಾನಂದ ಮುದ್ನಾಳ, ಟಿ.ಕೆ.ಲಮಾಣೀ. ಜಿ.ಆರ್.ಕಲಬುರ್ಗಿ ಸೇರಿದಂತೆ ಇತರರು ಸಹಿ ಹಾಕಿದ್ದಾರೆ.

