ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಗಳಿರುತ್ತವೆ. ಅವುಗಳನ್ನು ಹೆಕ್ಕಿ ತೆಗೆಯುವ ವೇದಿಕೆ ಸಿಗದ ಕಾರಣ ಹಿಂದೆ ಬಿದ್ದಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರಕಾರ ೨೦೦೨ರಲ್ಲಿ ಪಠ್ಯದ ಜೊತೆಗೆ ಕಲಿಕೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೋಣೂರ ಹೇಳಿದರು.
ಸಿಂದಗಿ ತಾಲೂಕಿನ ಯರಗಲ್ ಬಿ.ಕೆ ಗ್ರಾಮದ ಶ್ರೀ ಸಿದ್ದಶಂಕರಾನಂದ ಸ್ವಾಮೀಜಿ ಪ್ರೌಡಶಾಲೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವುಗಳ ಸಹಯೋಗದಲ್ಲಿ ಗಬಸಾವಳಗಿ ಕ್ಲಸ್ಟರ ಮಟ್ಟದ ಕಲಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಗುವಿನ ಪ್ರಗತಿ ಎಲ್ಲಿ ಅಡಗಿದೆ ಎಂದರೆ ಶಾಲಾ ತರಗತಿ ಕೋಣೆಯಲ್ಲಿ ಅಡಗಿದೆ. ಬರೀ ಅಕ್ಷರ ಜ್ಞಾನ ಪಡೆಯುವುದರಿಂದ ಮಗುವಿನ ಅಭಿವೃದ್ಧಿ ಅಸಾಧ್ಯ. ಪ್ರತಿಭೆಗಳಲ್ಲಿ ಬಾಗವಹಿಸುವುದು ಅತ್ಯಗತ್ಯ. ಸೂಕ್ತ ಪ್ರತಿಭೆಗಳನ್ನು ಹೊರ ತೆಗೆಯುವುದೆ ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಕಾರಣ ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರುವಲ್ಲಿ ಶಿಕ್ಷಕರ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ತೆಯ ಪ್ರ.ಕಾರ್ಯದರ್ಶಿ ಭೀಮಣ್ಣ ಹೆರೂರ, ಸಿಆರ್‌ಪಿ ಎಂ.ಆರ್.ಡೋಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಲಸ್ಟರ ಮಟ್ಟದಲ್ಲಿ ನಿವೃತ್ತ ಶಿಕ್ಷಕರಾದ ಮುತ್ತಪ್ಪ ಪಾತ್ರೋಟಿ, ರೇವಣ ಮಗ್ರುಮಖಾನೆ, ಭೀಮಾಶಂಕರ ಪವಾರ, ವ್ಹಿ.ಎಸ್. ಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಸಂಸ್ಥೆಯ ಸಹ-ಕಾರ್ಯದರ್ಶಿ ಎಂ.ಎಂ.ಹಂಗರಗಿ, ಎಲ್.ವ್ಹಿ.ಕುಲಕರ್ಣಿ, ಅಲ್ಲಿಸಾಬ ಬಂಕಲಗಿ, ಪತ್ರಕರ್ತ ಪಂಡಿತ ಯಂಪೂರೆ, ಸಿದ್ದಣ್ಣ ಮಕ್ತೆದಾರ, ಶಾಂತಪ್ಪ ಮರಡಿ, ಭೀಮನಗೌಡ ಬಿರಾದಾರ, ಶಿವು ಪಲ್ಲೇದ, ಗುರು ಕುಲಕರ್ಣಿ, ಶಿಕ್ಷಕ ದರೇಣ್ಣವರ, ಮುಖ್ಯಗುರು ಅರುಣಕುಮಾರ ನಾಯ್ಕೋಡಿ, ಬಿ.ಎಸ್.ಪಾಟೀಲ, ಬಿ.ಎಸ್.ಕೆರಕಿ, ಚೆನ್ನಪ್ಪ ದೊಡಮನಿ, ವಿಠ್ಠಲ ಕೋರವಾರ, ಸದಾಶಿವ ಮ್ಯಾಗೇರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಅನೀತಾ ಸಂಗಡಿಗರು ಪ್ರಾರ್ಥಿಸಿದರು. ಚೈತ್ರಾ ಬಾಸಗಿ, ಕಿರ್ತಿ ಗುಂಡಳ್ಳಿ ಸ್ವಾಗತ ಗೀತೆ ಹಾಡಿದರು. ಬೋರಮ್ಮ ಗೋಲಗೇರಿ ಸಂಗಡಿಗರು ಭಾವಗೀತೆ ಹಾಡಿದರು. ಶಿಕ್ಷಕಿ ಅಶ್ವಿನಿ ಚವ್ಹಾಣ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಅಂಬಿಗೇರ ನಿರೂಪಿಸಿ, ವಂದಿಸಿದರು.

