ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೨೦೨೪-೨೫ ನೇ ಸಾಲಿನ ಸ್ನಾತಕ ಅಂತಿಮ ರ‍್ಯಾಂಕ್ ಪಟ್ಟಿ ಪ್ರಕಟಿಸಿದ್ದು, ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕ ಬಿಎಸ್ಸಿ ಪದವಿಯಲಿ ಇಬ್ಬರು ರ‍್ಯಾಂಕ್ ಪಡೆಯುವ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ.
ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕ ಬಿಎಸ್ಸಿ ಪದವಿಯಲಿ ವಿದ್ಯಾರ್ಥಿನಿ ಅಲ್ಫಿಯಾ ಚೌಧರಿ ಶೇ. ೯೪.೩೬ ಪ್ರತಿಶತ ಅಂಕಗಳೊಂದಿಗೆ ತೃತೀಯ ರ‍್ಯಾಂಕ್ ಹಾಗೂ ಕಾವೇರಿ ಮೇಲಿನಕೆರಿ ಶೇ. ೯೨.೯೬ ಪ್ರತಿಶತ ಅಂಕಗಳೊಂದಿಗೆ ಎಂಟನೆ ರ‍್ಯಾಂಕ್ ಪಡೆಯುವ ಮೂಲಕ ಬಿಎಲ್‌ಡಿಇ ಸಂಸ್ಥೆಯ ಹಾಗೂ ಮಹಾವಿದ್ಯಾಲಯದ ಹೆಸರು ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ. ರ‍್ಯಾಂಕ್ ವಿಜೇತ ವಿಧ್ಯಾರ್ಥಿನಿಯರ ಸಾಧನೆಗೆ ಆಡಳಿತಾಧಿಕಾರಿ ಪ್ರೊ.ವಿ.ಎಸ್.ಬಗಲಿ ಹಾಗೂ ಕಾಲೇಜಿನ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಉಪ ಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.

Alfiya Choudhary

kaveri melinkeri

