ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾರಾಷ್ಟ್ರದ ಅಕ್ಕಲಕೋಟದ ಮಾಜಿ ಶಾಸಕ ಸಿದ್ರಾಮಪ್ಪ ಮಲಕಪ್ಪ ಪಾಟೀಲ(೮೭) ಇದೇ ನ.೧೩ ರ ಗುರುವಾರ ರಾತ್ರಿ ಸೋಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ಅವರ ಅಂತ್ಯಕ್ರಿಯೆ ಅಕ್ಕಲಕೋಟ ತಾಲೂಕಿನ ಕುಮಠೆ ಗ್ರಾಮದಲ್ಲಿ ನ.೧೪ ರ ಶುಕ್ರವಾರದಂದು ನೆರವೇರಿತು.
ಇವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ನಿಧನಕ್ಕೆ ಹಾಲಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಮೇಣದ ಬತ್ತಿ ಬೆಳಗಿಸುವುದರ ಮೂಲಕ ಶೃದ್ಧಾಜಂಲಿ ಸಲ್ಲಿಸಿದರು.
ಮೂಲಕ ಮೂಲತಃ ಕರ್ನಾಟಕದ ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜೂನ ೧೦, ೧೯೩೯ರಂದು ಹುಟ್ಟಿ ಬೆಳದು ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಚಡಚಣ ಪಟ್ಟದ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಪೂರೈಸಿದ ಇವರು ನಂತರ ಅಕ್ಕಲಕೋಟ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
ಅವರು ಅಕ್ಕಲಕೋಟ ತಾಪಂ ಅಧ್ಯಕ್ಷರಾಗಿ, ಸೋಲಾಪು ಜಿಪಂ ಉಪಾಧ್ಯಕ್ಷರಾಗಿ, ಸೋಲಾಪುರ ಡಿಸಿಸಿ ಬ್ಯಾಂಕ್‌ಗೆ ೩೫ ವರ್ಷ ಸಂಚಾಲಕರಾಗಿ, ಸ್ವಾಮಿ ಸಮರ್ಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ, ಅಕ್ಕಲಕೋಟ ಎಪಿಎಂಸಿ ಅಧ್ಯಕ್ಷರಾಗಿ, ಒಂದು ಸಲ ಅಕ್ಕಲಕೋಟದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಕಲಕೋಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಹಿರಿಯದಾಗಿತ್ತು.
ಇವರ ನಿಧನಕ್ಕೆ ಬಸುಗೌಡ ಪಾಟೀಲ, ರವಿ ಕೆಂಗಾರ, ಶ್ರೀಮಂತ ಕಾರಭಾರಿ, ಸಯ್ಯದ ಮಾಸ್ತರ, ಬಿ.ಎನ್.ಇಂಗಳೆ, ಶ್ರೀಕಾಂತ ಪಾಟೀಲ, ಶಂಕರ ಇಂಗಳೆ, ಮಧುಕರ ಕಾರಭಾರಿಯವರುಗಳು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

