ಉದಯರಶ್ಮಿ ದಿನಪತ್ರಿಕೆ
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಶ್ರೀಮಠದ ಒಡೆಯ ಅಭಿನವ ರುದ್ರಮುನಿ ಶಿವಾಚಾಯ೯ರ ನೇತೃತ್ವದಲ್ಲಿ ಲಿಂ.ರುದ್ರಮುನಿ ಶಿವಾಚಾಯ೯ರ ೪೮ನೇ ಪುಣ್ಶಾರಾಧನೆ ನಿಮಿತ್ಶ ನ.೧೭ರಿಂದ ನ.೨೭ ರವರೆಗೆ ನಿತ್ಶ ೧೧ ದಿನಗಳ ಕಾಲ ರಾತ್ರಿ ೮ ರಿಂದ ೯ರ ವರೆಗೆ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ನಡೆಯಲಿದೆ. ಶಹಾಪೂರದ ಸರಸ್ವತಿ ಪೀಠ, ವಿಶ್ವಕಮ೯ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಡುವರು. ಯಂಕಂಚಿಯ ನಿಂಗಣ್ಣ ವಿಶ್ವಕಮ೯ ಸಂಗೀತ ಸೇವೆ ನೀಡುವರು. ಮೋರಟಗಿಯ ರವಿ ವಿಭೂತಿ ತಬಲಾ ಸಾಥ್ ನೀಡುವರು. ನ.೧೭ರಂದು ರಾತ್ರಿ ೮ಕ್ಕೆ ಪುರಾಣ ಆರಂಭೋತ್ಸವಕ್ಕೆ ಉದ್ದಿಮೆದಾರ ವೆಂಕಟೇಶ ಗುತ್ತೆದಾರ, ಚಿಕ್ಕರೂಗಿಯ ಈರಣ್ಣ ಶಾಸ್ತ್ರೀಗಳು ಉದ್ಘಾಟಿಸುವರು.
ಮುಧೋಳ (ಬಿ) ಗಂಜಗಟ್ಟಿ ಡಾ.ವೈಜನಾಥ ಶಿವಾಚಾಯ೯ರು,ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾಯ೯ರು ದಿವ್ಶ ಸಾನಿಧ್ಶವಹಿಸುವರು.
ರೋಡಗಿಯ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ (ಡೋಣಿ) ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಮುರಗೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಚಬನೂರದ ಜೋತಿಷ್ಶರತ್ನ ರಾಮಲಿಂಗಯ್ಶ ಸ್ವಾಮಿಗಳು, ನಾಲತವಾಡದ ಗುರುಸ್ವಾಮಿ ರಾಮಗಿರಿ ಹಿರೇಮಠ, ಖಾನಾಪೂರದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ, ಹೊನ್ನಳ್ಳಿಯ ಕಲ್ಶಾಣದೇಶ್ವರ ಮಠದ ಕಲ್ಶಾಣದಯ್ಶ ಸ್ವಾಮೀಜಿ, ಹೊನ್ನಳ್ಳಿಯ ವೀರಘಂಟಿ ಮಡಿವಾಳೇಶ್ವರ ಮಠದ ಗುರುಲಿಂಗಯ್ಶ ಸ್ವಾಮೀಜಿ, ಹಿರೇ ಅಲ್ಲಾಪೂರ ಕಲ್ಶಾಣಮಠದ ಮಲ್ಲಯ್ಶ ಸ್ವಾಮೀಜಿ ಸಮ್ಮುಖ ವಹಿಸುವರು. ನ.೨೭ರಂದು ಶಿವದೀಕ್ಷಾ,ಅಯ್ಶಚಾರ ಜರುಗುವುದು. ರಾತ್ರಿ ೧೦ಕ್ಕೆ ಧಮ೯ಸಭೆ, ನಂತರ ಸಂಗೀತ ಸೇವೆ,ಭಜನಾ ಕಾಯ೯ಕ್ರಮ ನಡೆಯಲಿದೆ. ನ.೨೮ರಂದು ಬೆಳಗ್ಗೆ ಲಿಂ.ರುದ್ರಮುನಿ ಶಿವಾಚಾಯ೯ರ ಕತೃ೯ಗದ್ದುಗೆಗೆ ರುದ್ರಾಭಿಷೇಕ, ಸಾರವಾಡದ ರುದ್ರಸ್ವಾಮಿಗಳ ವೈದಿಕತ್ವದಲ್ಲಿ ಹಾಗೂ ಊರಿನ ಸುಮಂಗಲೆಯರಿಂದ ಕುಂಭಮೇಳ, ಕಳಸದೊಂದಿಗೆ ಕೋಲಾಟ ವಾದ್ಶವೈಭವಗಳೊಂದಿಗೆ ಪುರಾಣ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.”

