ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಇಟ್ಟುಕೊಂಡು ೭೧ ವರ್ಷಗಳಿಂದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ ಹೇಳಿದರು.
ಪಟ್ಟಣದ ಸಮೃದ್ಧಿ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಪಿತಾಮಹ ಎಸ್.ಎಸ್.ಪಾಟೀಲ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ನಂತರ ಸಹಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನವೆಂಬರ್ ೧೪ರಿಂದ ೨೦ರವರೆಗೆ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಜರುಗಲಿದೆ. ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬ ಧ್ಯೇಯದೊಂದಿಗೆ ಈ ಸಪ್ತಾಹ ಆರಂಭಗೊಂಡಿದೆ ಎಲ್ಲ ಸಹಕಾರಿಗಳು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಹಿತಿ ನೀಡಿದರು.
ಸಂಘದ ಮಾರ್ಗದರ್ಶಕ ಆರ್.ಆರ್.ನಾಯಿಕ, ನಿರ್ದೇಶಕರುಗಳಾದ ಬಸವರಾಜ ಬಬಲೇಶ್ವರ, ವೆಂಕಟೇಶ ಕುಲಕರ್ಣಿ, ಮಂಜುನಾಥ ಒಂಟೆತ್ತಿನ, ಸುಭಾಸ ಜಾಧವ, ಎ.ಎಸ್.ಬಿರಾದಾರ(ಹರನಾಳ) ಸಿಬ್ಬಂದಿ ಬಸವರಾಜ ಸಜ್ಜನ, ಲತಾ ತಡಪಟ್ಟಿ, ಅಕ್ಷಯ ರಾಠೋಡ, ಶರಣಯ್ಯ ಹಿರೇಮಠ, ಬಸವರಾಜ ಹಿರೇಮಠ, ವಿರೇಶ ವಡ್ಡೋಡಗಿ ಇದ್ದರು.

