ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹೊಸದಾಗಿ ಮಂಜೂರಾಗಿರುವ ಎರಡು ಮೆಟ್ರಿಕ್ ನಂತರದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಬಾಲಕರ-ಬಾಲಕೀಯರ ೧೦೦ ಸಂಖ್ಯಾಬಲದ ವಸತಿ ನಿಲಯಗಳಿಗೆ ಬಾಡಿಗೆ ಕಟ್ಟಡದ ಅವಶ್ಯಕತೆವಿದ್ದು, ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ನಿಲಯಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಸಾಕಷ್ಟು ಸ್ಥಳಾವಕಾಶವಿರುವ ಸುಸಜ್ಜಿತ ಮೂಲಭೂತ ಸೌಕರ್ಯವುಳ್ಳ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ ಹಾಗೂ ಸ್ನಾನದ ಗೃಹಗಳು, ಸೋಲಾರ್ ವಾಟರ್ ಹೀಟರ್, ಸಾಕಷ್ಟು ಪ್ರಮಾಣದಲ್ಲಿ ನೀರು ಹೊಂದಿರುವ ಕಟ್ಟಡಗಳ ಅವಶ್ಯಕತೆ ಇದ್ದು, ಆಸಕ್ತ ಕಟ್ಟಡ ಮಾಲೀಕರು ಬಾಡಿಗೆ ಕಟ್ಟಡ ನೀಡುವವರು ನವೆಂಬರ್ ೨೧ರೊಳಗಾಗಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಡಿ ದೇವರಾಜ ಅರಸು ಭವನ, ಜಿಲ್ಲಾ ಪಂಚಾಯತ ಕಛೇರಿ ಹತ್ತಿರ, ಕನಕದಾಸ ಬಡಾವಣೆ, ವಿಜಯಪುರ ಕಚೇರಿ ಅಗತ್ಯ ದಾಖಲಾತಿ ಸಲ್ಲಿಸಬಹುದಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:೦೮೩೫೨-೨೬೭೯೯೩ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
