ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ಬೆಂಗಳೂರಿನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಿಸಿದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ವನ್ನು ಮುದ್ದೇಬಿಹಾಳದಲ್ಲಿ ಆಯೋಜಿಸಲಾಗಿದೆ.
ಸ್ವುದ್ಯೋಗ ಸ್ಥಾಪಿಸಲು ಇರುವ ಅವಕಾಶ, ಕೈಗಾರಿಕಾ ಇಲಾಖೆ ಮತ್ತು ಬ್ಯಾಂಕ್‌ನಿಂದ ಸಿಗುವ ಸಹಾಯ ಸೌಲಭ್ಯ, ಮಾರುಕಟ್ಟೆ ಸಮೀಕ್ಷೆ, ಮಾರುಕಟ್ಟೆ ನಿರ್ವಹಣೆ ಹಾಗೂ ಬ್ಯುಸಿನೆಸ್ ಪ್ಲ್ಯಾನ್ ತಯಾರಿಸುವ ವಿಧಾನವನ್ನು ತರಬೇತಿಯಲ್ಲಿ ನೀಡಲಾಗುವುದು.
ಆಸಕ್ತ ೨೦ ರಿಂದ ೪೦ ವರ್ಷ ವಯೋಮಾನದವರು ನವೆಂಬರ್ ೨೦ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ ೨೨ರ ಬೆಳಿಗ್ಗೆ ೧೦ ಗಂಟೆಗೆ ಮುದ್ದೇಬಿಹಾಳ ಪುರಸಭೆ ಹತ್ತಿರದಲ್ಲಿರುವ ಸಾಯಿ ಕಂಪ್ಯೂಟರ್ ಟ್ರೆನಿಂಗ್ ಇನ್ನಸ್ಟಿಟ್ಯುಟ್‌ನಲ್ಲಿ ಆಧಾರ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ ಹಾಗೂ ಎರಡು ಪಾಸಪೊರ್ಟ್ ಸೈಜ್ ಫೋಟೋದೊಂದಿಗೆ ಹಾಜರಿರುವಂತೆಯೂ, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೬೩೬೦೪೫೬೭೨೯ ಹಾಗೂ ೯೪೪೮೬೪೫೮೫೯ಗೆ ಸಂಪರ್ಕಿಸಬಹುದಾಗಿದೆ ಎಂದು ಸಿಡಾಕ್‌ನ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
