ಆಲಮೇಲ ದಲ್ಲಿ ನಡೆದ ರೈತ ಹೋರಾಟದಲ್ಲಿ ರಾಜ್ಯ ರೈತಸಂಘದ ಅದ್ಯಕ್ಷ ಚುನ್ನಪ್ಪ ಪೂಜಾರಿ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸರ್ಕಾರ ನಿಗದಿ ಮಾಡಿದ ದರ ನೀಡುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ರಾಜ್ಯ ರೈತಸಂಘದ ಅದ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.
ಶುಕ್ರವಾರ ಆಲಮೇಲ ದಲ್ಲಿ ನೆರೆದ ರೈತರ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಖಾನೆ ಮಾಲಿಕರು ಮೊಂಡುವಾದ ಮಾಡುತ್ತಿದ್ದು ಆದಷ್ಟು ಬೇಗ ಸರ್ಕಾರ ನಿಗದಿ ಮಾಡಿರುವ ದರ ಘೋಷಣೆ ಮಾಡಿ ಕಾರ್ಖಾನೆ ಪ್ರಾರಂಬಿಸಬೇಕು ಎಂದರು.
ತೂಕ ದಲ್ಲಿ ಮೋಸ ಅದನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಗ್ಗೆನು ಹೋರಾಟ ಮಾಡಲಾಗುವದು. ಡಿಜಿಟಲ್ ತೂಕ ಯಂತ್ರದಲ್ಲಿ ಅವ್ಯವಹಾರ ನಡೆದಿದ್ದು ಅದನ್ನು ನಿರ್ಮೂಲನೆ ಮಾಡಲು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತ ಮಠದ ಶ್ರೀಗಳು, ಶಶಿಧರ ಗಣಿಯಾರ, ಮಾಂತೇಶ ಕತ್ತಿ, ಅಪ್ಪು ಶೆಟ್ಟಿ, ಶ್ರೀಮಂತ ದುದ್ದಗಿ ಸೇರಿದಂತೆ ಸಾವಿರಾರು ಜನ ರೈತರು ಭಾಗವಹಿಸಿದ್ದರು.

