ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ಚಾರಿತ್ರಿಕ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕೇಂದ್ರದಲ್ಲಿರುವ ಎನ್.ಡಿ.ಎ. ಮೈತ್ರಿಕೂಟ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅನೇಕ ಸುಧಾರಣೆ ಮಾಡಲಾಗಿದೆ. ದೇಶದ ಜನರು ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿದೆ. ಇದು ಬೇರೆ ರಾಜ್ಯಗಳಿಗೂ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಬಿಹಾರ ಮತದಾರರು ಎನ್.ಡಿ.ಎ. ಮೈತ್ರಿ ಕೂಟ ಪರ ಹೆಚ್ಚು ಮತಗಳನ್ನು ನೀಡುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಮೈತ್ರಿಕೂಟ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನಡೆ ಸಾಧಿಸಿದೆ. ಇದು ಆರ್.ಜೆ.ಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧಗೆ ಭಾರಿ ಮುಖಭಂಗವಾಗಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ, ಮುಖಂಡರಾದ ಮಲ್ಲಿಕಾರ್ಜುನ ಶೇಬಗೊಂಡ, ರಾಜು ಮುಳವಾಡ, ಜಗದೀಶ ಸೊನಗದ, ಸಂತೋಷ ನಾಯಕ, ಸುರೇಶ ಸಾಸನೂರ,ಬಸಪ್ಪ ಸಿದ್ದಗೊಂಡ, ಮಲ್ಲು ಬನಾಶಿ, ಮಲ್ಲನಗೌಡ ರಾಯಗೊಂಡ, ಸಂಗನಗೌಡ ಯಂಕಚಿ, ಮಹಾಂತೇಶ ಕಿಣಗಿ, ಶಿವನಾರಾಯಣ ಚಿಚ್ಚೂಳಿ, ಹುಲಿಗೆಪ್ಪ ತಳವಾರ, ಶಿವು ಬಿರಾದಾರ, ಮಂಜುನಾಥ ಬಿರಾದಾರ, ಶಿವನಗೌಡ ಬಿರಾದಾರ, ಮುತ್ತುರಾಜ ಹಾಲಿಹಾಳ, ಬಲವಂತ ನಾಯಕ ಇತರರು ಭಾಗವಹಿಸಿದ್ದರು.

