ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಟಕ್ಕಳಕಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ರಸ್ತೆ ಮೇಲೆ ಚರಂಡಿ ನೀರುವ ಹರಿಯುತ್ತಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಟಕ್ಕಳಕಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಅವರು, ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾಮದ ಕೆಲವೊಂದು ವಾರ್ಡಿನಲ್ಲಿ ಚರಂಡಿ ಮೇಲೆ ನೀರು ಹರಿಯುತ್ತಿದೆ. ಸಿಸಿ ರಸ್ತೆ ಮೇಲೆ ಕಸ ಕಡ್ಡಿ, ಚರಂಡಿ ನೀರು ಹರಿಯುತ್ತಿದೆ. ಸರಿಯಾದ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ವಿದ್ಯುತ್ ದೀಪದ ವ್ಯವಸ್ಥೆ ಸಹ ಸರಿಯಾಗಿ ಇಲ್ಲ. ಇದನ್ನು ಗಮನಸಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿ ಯಾವ ರೀತಿಯಿಂದ ಕೂಡಿದೆ ಎಂಬುವದು ಗೊತ್ತಾಗುತ್ತಿದೆ. ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಬಡಿಗೇರ ಅವರಿಗೆ ಈ ಎಲ್ಲ ಸಮಸ್ಯೆಗಳು ಎಂಟು ದಿನಗಳಲ್ಲಿ ಬಗೆ ಹರಿಸಬೇಕು. ಒಂದು ವೇಳೆ ಬಗೆಹರಿಸದೇ ಹೋದರೆ ಕರವೇಯಿಂದ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕರಿಯಪ್ಪ ಗುಡಿಮನಿ, ಕರವೇ ಸಾಮಾಜಿಕ ಜಾಲತಾಣ ತಾಲೂಕಾಧ್ಯಕ್ಷ ಹಣಮಂತ ಟಕ್ಕಳಕಿ, ರಾಜು ದಡ್ಡಿ, ಸಿದ್ದಾರ್ಥ ದಡ್ಡಿ, ಭರತ ಗಾಯಕವಾಡ, ರಾಜು ಬೇಲಿ, ಬಸು ಬೇವಿನಗಿಡದ, ಕಿರಣ ಗುಡಿಮನಿ, ಕುಮಾರ ನಾಗರದಿನ್ನಿ, ಬಸವರಾಜ ನಡುವಿನಮನಿ ಇತರರು ಇದ್ದರು.

