ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಮಂಗಳವಾರ ಒನಕೆ ಓಬ್ಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಒನಕೆ ಒಬ್ಬವ್ವ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಒನಕೆ ಓಬ್ಬವ್ವ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರ ರಾಣಿಚನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಒನಕೆ ಒಬ್ಬವ್ವಳೂ ಒಬ್ಬರಾಗಿದ್ದಾರೆ. ಹೈದರಾಲಿಯು ಚಿತ್ರದುರ್ಗದ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿದಾಗ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿಯಾದ ಓಬ್ಬವ್ವಳು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ಒನಕೆಯಿಂದಲೆ ನೂರಾರು ಶತ್ರುಗಳನ್ನು ಕೊಂದು ಹಾಕುವ ಮೂಲಕ ಇತಿಹಾಸದ ವೀರವನಿತೆ ಎನಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ ಎಂದರು.
ಸಂದರ್ಭದಲ್ಲಿ ಉಪತಹಸೀಲ್ದಾರ ಬಿ.ಆರ್.ಪೋಲೇಶಿ, ಶಿರಸ್ತೇದಾರ ಎ.ಎಚ್.ಬಳೂರಗಿ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎಂ.ಎಂ.ದಪ್ಪೇದಾರ,ವಿವಿಧ ಇಲಾಖೆಯ ಸಿಬ್ಬಂದಿಗಳಾದ ವಿಲಾಸ ಜಾಡರ, ವಿರೇಶ ಗುಡ್ಲಮನಿ, ಭಾಗ್ಯಶ್ರೀ ಕಟ್ಟಿಮನಿ, ಹೃಷಿಕೇಶ ಇಂಗಳೆ, ಪ್ರಸನ್ನ ಕರಿಜಾಡರ, ಆರತಿ ತೆನಹಳ್ಳಿ, ಸುರೇಶ ಪಾಟೀಲ, ಕಾಂಚನಾ ಸಂದಿಮನಿ, ಅನ್ನಪೂರ್ಣ ಪಾಟೀಲ, ಎ.ಎ.ನಂದಿ, ಡಿಎಸ್ಎಸ್ ಮುಖಂಡರಾದ ಮಹಾಂತೇಶ ಸಾಸಾಬಾಳ, ಪರಶುರಾಮ ಬೆಕಿನಾಳ, ಅಶೋಕ ಚಲವಾದಿ, ಮುತ್ತುರಾಜ ಬಾಗೇವಾಡಿ,ಅರವಿಂದ ಸಾಲವಾಡಗಿ ಸೇರಿದಂತೆ ಇತರರು ಇದ್ದರು.

