ನ.೧೯ ರಂದು ನಡೆವ ಅಖಿಲ ಕರ್ನಾಟಕ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನವಂಬರ ೧೯ ರಂದು ವಿಜಯಪುರದಲ್ಲಿ ನಡೆಯುವ ೨೭ನೇ ಅಖಿಲ ಕರ್ನಾಟಕ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕ, ಶೈಕ್ಷಣಿಕ ಚಿಂತಕ, ಶರಣ ಸಾಹಿತಿ ಸಿದ್ದಲಿಂಗ ಮನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಗತಿ ಹೈಸ್ಕೂಲ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.
ಪರಿಷತ್ತಿನ ಅಧ್ಯಕ್ಷರಾದ ಪ.ಗು. ಸಿದ್ಧಾಪೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾಲಕರಾದ ಡಾ. ಜಿ.ಎಸ್. ಭೂಸಗೊಂಡ ಸಿದ್ದಲಿಂಗ ಮನಹಳ್ಳಿ ಅವರ ಹೆಸರನ್ನು ಅಂತಿಮಗೊಳಿಸಿದರು.
ಆಯ್ಕೆ ಸಮಯದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾವಸಾಬ ಬಿರಾದಾರ, ಲಾಲಸಾಬ ಮೇಲಿನಮನಿ, ಕೆ.ಎಸ್. ಬಾಗೇವಾಡಿ, ಸಿದ್ದರಾಮ ಬಿರಾದಾರ, ಅಡವಿಸ್ವಾಮಿ ಕೊಳಮಲಿ, ಡಿ. ಜೋಸೆಫ್, ಉಮಾಪತಿ ಡಂಗಿ, ಮುರುಗೇಶ ಸಂಗಮ ಮುಂತಾದವರು ಹಾಜರಿದ್ದರು.
ಸ್ವಾಗತ ಸಮಿತಿ ಸದಸ್ಯರುಗಳಾದ ಪ್ರೇಮಾನಂದ ಬಿರಾದಾರ, ಎಂ.ಎಸ್. ಕಳ್ಳಿಮನಿ, ಚಂದ್ರು ಚೌಧರಿ, ಬಿ.ಎಸ್. ನರಗುಂದ, ಚಂದ್ರಶೇಖರ ಕುಲಕರ್ಣಿ, ಮುಸ್ತುಫಾ ದುಂಡಸಿ, ಬಿ.ಎಂ. ಬಿರಾದಾರ, ವೇಣುಗೋಪಾಲ ಜೋಶಿ, ಸುಪ್ರೀಯಾ ಬೈಚಬಾಳ, ಶೀತಲ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಪರಿಷತ್ತಿನ ಕಾರ್ಯದರ್ಶಿ ಶಂಕರ ಬೈಚಬಾಳ ತಿಳಿಸಿದ್ದಾರೆ.

