ಉದಯರಶ್ಮಿ ದಿನಪತ್ರಿಕೆ
ಇಂಡಿ: ಇತಿಹಾಸ, ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಭಜನೆ ಪುರಾಣ ಹಾಗೂ ಪ್ರವಚನ ಬಗೆಗಿನ ಸಮಗ್ರ ಮಾಹಿತಿ ಮಠಗಳ ಕೊಡುಗೆಯಾಗಿದೆ ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಂತೇಶ್ವರ ಜಾತ್ರೆಯ ನಿಮಿತ್ಯ ಹಮ್ಮಿಕೊಂಡ ಲಚ್ಯಾಣ ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೈನಾಪುರ ರೇಣುಕಾಚಾರ್ಯ ಶಿವಾಚಾರ್ಯರರು ಮಾತನಾಡಿ ಮಠ ಮಾನ್ಯಗಳಿಂದಲೇ ತಾಲೂಕು ಪ್ರಸಿದ್ದಿ ಪಡೆದಿದೆ. ಹಲವಾರು ಮಠಗಳು ಅನ್ನಪ್ರಸಾದ ಉಚಿತ ಶಿಕ್ಷಣ ಸಂಸ್ಕಾರ ನೀಡುತ್ತಿವೆ. ಪ್ರವಚನದಿಂದ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ದೇವಸ್ಥಾನ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಧಾರ್ಮಿಕತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಇಂದಿನ ಯುವ ಪೀಳೀಗೆ ಮುಂದಾಗಬೇಕಿದೆ. ಯಾವದೇ ಕೆಲಸವಿರಲಿ ಕೀಳಾಗಿ ನೋಡದೇ ಕಾರ್ಯಗಳನ್ನು ಮಾಡಿದಾಗ ನೆಮ್ಮದಿ ಬದುಕು ಸಾಧ್ಯ ಎಂದರು. ಡಿ ೧ ರಂದು ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಪ್ರವಚನಕಾರ ವೇದ ಮೂರ್ತಿ ಮಡಿವಾಳಯ್ಯ ಶಾಸ್ತಿçÃಗಳು ಮಾತನಾಡಿ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ದಲಿಳಗ ಮಹಾರಾಜರ ಪುರಾಣ ೨೧ ದಿನಗಳ ಕಾಲ ಇಂದಿನಿAದ ಪ್ರಾರಂಭವಾಗುವದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಪ್ರಭುಗೌಡ ಪಾಟೀಲ, ಸೋಮು ನಿಂಬರಗಿಮಠ ಮಾತನಾಡಿದರು.
ವೇದಿಕೆಯ ಮೇಲೆ ಶ್ರೀಕಾಂತ ಕೂಡಿಗನೂರ, ಅನೀಲಪ್ರಸಾದ ಏಳಗಿ, ದೇವೆಂದ್ರ ಕುಂಬಾರ, ಶ್ರೀಶೈಲಗೌಡ ಬಿರಾದಾರ ಮತ್ತಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲು ದೇವರ, ತಮ್ಮಣ್ಣ ಮೇತ್ರಿ, ಅಜೀತ ಹಿರೇಮಠ,ಚೇತನ ಧನಶೆಟ್ಟಿ,ಸಂತೋಷ ಬಡಿಗೇರ, ಶಾಂತು ಕಂಬಾರ, ಶ್ರೀಶೈಲ ಅಕಲಾದಿ ಮತ್ತಿತರಿದ್ದರು.

