ಸರಕಾರಿ ಪ್ರೌಢಶಾಲೆ ಹುನ್ನೂರಿನ 2003-04 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುನಮನ ಹಾಗೂ ಸ್ನೇಹ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಾವು ಯಾವುದೇ ಗುರಿಯನ್ನು ಮುಟ್ಟಬೇಕಾದರೆ ನಮಗೆ ವಿಧ್ಯೆ ಕಲಿಸಿದ ಗುರುಗಳೆ ಕಾರಣ, ನಮ್ಮ ದೇಶ ಗುರುವಿಗೆ ಶ್ರೇಷ್ಠವಾದ ಸ್ಥಾನಮಾನವನ್ನು ನೀಡಿದೆ ಎಂದು ಓಲೆಮಠದ ಶ್ರೀ ಆನಂದ ದೇವರು ಹೇಳಿದರು.
ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ನಡೆದ ಸರಕಾರಿ ಪ್ರೌಢಶಾಲೆ ಹುನ್ನೂರಿನ 2003-04 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುನಮನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯೇ ಗುರುಗಳನ್ನು ಸಂತೋಷ ಪಡಿಸುವ ಸಂಗತಿಯಾಗಿದೆ, ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವ ಶಿಕ್ಷಕರು, ಅವರ ಸಾಧನೆಯಿಂದ ಸಂತೋಷ ಪಡುತ್ತಾರೆ. ಕಠಿಣವಾದ ಕಲ್ಲನ್ನು ಮೂರ್ತಿಕಾರರು ಕೆತ್ತಿ ಸುಂದರವಾದ ವಿಗ್ರಹ ತಯಾರಿಸುವಂತೆ ಗುರುಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಮಾತನಾಡಿ, ಬೀಜ ಮೊಳಕೆ ಒಡೆದು ಹೇಗೆ ದೊಡ್ಡ ಮರ ಆಗುತ್ತದೆಯೋ, ಹಾಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರ, ತಿಳಿಸಿ ಸಮಾಜದಲ್ಲಿ ಪ್ರಜ್ಞಾವಂತ ಪ್ರಜೆಯನ್ನಾಗಿ ರೂಪಿಸುವರು ಶಿಕ್ಷಕರು. ಗುರುವಿನ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳಾದ ರಮೇಶ್ ಕೋಲಾರ್, ಶ್ರೀಕಾಂತ್ ಜಾಲಿಬೇರಿ, ಶ್ರವಣಕುಮಾರ
ಸುವರ್ಣಖಂಡಿ, ವರಶಂಕರ ಕಡಪಟ್ಟಿ, ಬಾಳು ಲೋಕಾಪುರ , ಜ್ಯೋತಿಬಾ ಬೆಳಗಲಿ, ಬಸವರಾಜು ಜ್ಯೋತೆಪ್ಪನವರ, ಶಿವಲಿಂಗ ದೊಡ್ಲಕ್ಕಣ್ಣವರ್, ಪ್ರವೀಣ್ ಶಿರೋಳ, ದೀಪಕ್ ಪಾಟೀಲ, ಸಾಗರ ಮುಗಳಖೊಡ, ಬಸವರಾಜ್ ಕಿತ್ತೂರ, ಧರೆಪ್ಪ ಸಂಗೊಳ್ಳಿ, ಶಿವಾನಂದ ತೇಲಿ, ಹನಮಂತ ಜೊತಪನ್ನವರ, ಬಸವರಾಜ ಹುಂಕಿ, ಸುಮತಿ ಮುತ್ತೂರ, ಸೌಜನ್ಯ ಶಿರೋಳ, ಸುಮಾ ಅತ್ಯಪ್ನವರ್, ಸುರೇಖಾ ಸವನೂರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಸವರಾಜ್ ಬಿರಾದಾರ ಅನಿಸಿಕೆ ವ್ಯಕ್ತಪಡಿಸಿದರು, ಲಿಂಗಾನಂದ ಗವಿಮಠ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು, ಸತೀಶ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಸಬರದ ಹಾಗೂ ಸಂಗಡಿಗರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು ಕುಮಾರ.ರಾಹುಲ ಬಳುಲಗಿಡದ ಸ್ವಾಗತಿಸಿದರು. ಸಂಗಮೇಶ ಗಾಣಿಗೇರ, ಸರಿತಾ ಸಿರಗುಪ್ಪಿ ನಿರೂಪಣೆ ಮಾಡಿದರು. ಶಿವಾನಂದ ಹಿರೇಮಠ ವಂದಿಸಿದರು.
ಶಾಲಾ ಗುರು ವೃಂದದ ಮೆರವಣಿಗೆ, ಸನ್ಮಾನ
2003-04ನೇ ಸಾಲಿನ ಪ್ರೌಢ ಶಾಲಾ ಗುರು ವೃಂದದ ಐ.ಪಿ.ರಾಠೋಡ, ಮಂಜುನಾಥ ಮಾನೆ, ಕೆ.ಎಮ್. ಪೂಜಾರಿ, ಎಲ್. ಕೆ. ವಿಮಠ, ಕೆ. ಕೆ. ಮಠ, ಎ. ಎಮ್. ಅವಟಿ, ಬಿ. ಎಸ್. ಕುಂಬಾರ, ಎಸ್. ಕೆ. ಕಳ್ಳಿಮಠ, ಎಸ್. ಎಮ್. ದಯಾಗೊಂಡ, ಎಮ್. ಏ. ಮಾಗಿ, ಎಮ್. ಎ. ದೇಶಪಾಂಡೆ, ವಿ. ಟಿ. ಪಡತಾರೆ, ಎಂ. ಪಿ. ಜೀರಗಾಳ,ಶ್ರೀಮತಿ ಬಾಣದ ಮೇಡಂ, ಶ್ರೀಮತಿ ವೀಣಾ ಹಾವನೂರ ಶ್ರೀಮತಿ ಎಮ್. ಸಿ. ಹೋಸಮಠ, ಬಸವರಾಜ ಮಲಕನ್ನವರ, ಎಸ್. ಎಮ್. ಬಿರಾದಾರ, ಅವರಿಗೆ ಮೆರವಣಿಗೆ ಮೂಲಕ ಪುಷ್ಪ ಸಮರ್ಪಿಸಿ, ಸನ್ಮಾನಿಸಿ ಗೌರವಿಸಲಾಯಿತು.
“21 ವರ್ಷಗಳ ನಂತರ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸಂತಸ ತಂದಿದೆ. ನಮ್ಮೆಲ್ಲರನ್ನ ನಾಗರಿಕರನ್ನಾಗಿ ಮಾಡಿದ ಸಮಾಜ ಗುರುತಿಸುವ ಹಾಗೆ ರೂಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಗುರುವಂದನಾ ಕಾರ್ಯಕ್ರಮದ ಮೂಲಕ ಗುರುವಿನ ಋಣವನ್ನು ತೀರಿಸಬೇಕು, ಸುಖಕರ ಜೀವನಕ್ಕೆ ಗುರುವಿನ ಕೃಪೆ ಬೇಕು. ನಮ್ಮ ಜೀವನಕ್ಕೆ ಭದ್ರಬುನಾದಿಯಾಗಿ, ಉತ್ತಮ ಸಂಸ್ಕಾರ ಕೊಟ್ಟು, ಉತ್ತಮ ಪ್ರಜೆಯನ್ನಾಗಿ ಮಾಡಿದ ಗುರುವಿನ ಪಾತ್ರ ದೊಡ್ಡದು. ಗುರುಗಳು ನಮಗೆ ಮಾಡಿದ ವಿದ್ಯಾದಾನ ಜೀವನಪೂರ್ತಿ ನೆನಪಿರುತ್ತದೆ.”
– ರಮೇಶ ಕೋಲಾರ
ಹಳೆಯ ವಿದ್ಯಾರ್ಥಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಯಾದಗಿರಿ

