ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ನಗರದ ವೇಣುಗ್ರಾಮ ಫೌಂಡೇಶನ್ ವತಿಯಿಂದ ಜಾಂಬೋಟಿಯ ಮಾಧ್ಯಮಿಕ ವಿದ್ಯಾಲಯ ಶಾಲೆಯ
ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುವಾರ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಇದಲ್ಲದೆ ಈ ವೇಳೆ ಅರ್ಹ ಬಡಮಕ್ಕಳ ಶಾಲಾವೆಚ್ಛವನ್ನು ಕೂಡ ನೀಡಲಾಯಿತು.
ಬೆಳಗಾವಿ ನಗರದ ವೇಣುಗ್ರಾಮ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಒಬ್ಬರಾದ ಕೀಲು-ಮೂಳೆ ಶಸ್ತ್ರತಜ್ಞ ಡಾ.ಅಶೋಕ ಸಂಪಗಾರ ಅವರು ಫಲಾನುಭವಿಗಳಿಗೆ ಚೆಕ್ಕುಗಳನ್ನು ವಿತರಿಸಿದರು.
ಶಾಲೆಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ವೇಣುಗ್ರಾಮ ಆಸ್ಪತ್ರೆಯು ಗುಣಮಟ್ಟದ ಸೇವೆಯನ್ನು ನೀಡುತ್ತಿರುವುದಲ್ಲದೆ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದನ್ನು ಶ್ಲಾಘಿಸಿದ್ದಾರೆ. ಫಲಾನುಭವಿ ಮಕ್ಕಳ ಪಾಲಕರು ವೇಣುಗ್ರಾಮ ಫೌಂಡೇಶನ್ ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಪರವಾಗಿ ಯೋಗೇಶ ದೇಶಪಾಂಡೆ ಉಪಸ್ಥಿತರಿದ್ದರು.