ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಕಲಕೇರಿ ಮತ್ತು ಕೋರವಾರ ಶಾಖೆಗೆ ಸಂಬಂಧಿಸಿದ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಹಗಲು ಹೊತ್ತಿನಲ್ಲಿ ಹೊಲಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ ಫೀಡರ್‌ನ್ನು ರೈತರ ಅಭಿಲಾಷೆಯಂತೆ ರೈತರ ಒಳಿತಿಗಾಗಿ ಚಾಲನೆ ನೀಡಲಾಗುತ್ತಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಬ. ಪಾಟೀಲ, ಕುದರಿಸಾಲವಾಡಗಿ ಅವರು ಹೇಳಿದರು.
ಕಲಕೇರಿಯ ೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ಮಿಸಲಾದ ನೂತನ ಫೀಡರ್ ಉದ್ಘಾಟನಾ ಸಮಾರಂಭದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನೂತನವಾಗಿ ನಿರ್ಮಿಸಲಾದ ಫೀಡರ್‌ನಿಂದ ಕಲಕೇರಿ ಮತ್ತು ಕೋರವಾರ ಶಾಖೆಗೆ ಸಂಬಂಧಿಸಿದ ಹಳ್ಳಿಗಳಾದ ಹಂಚಲಿ, ಬಿಬಿ ಇಂಗಳಗಿ, ಕೊಂಡಗೂಳಿ, ಅಂಬಳನೂರ, ಕೆಸರಟ್ಟಿ, ಬಿಂಜಲಭಾವಿ, ಕೆರುಟಗಿ, ತಿಳಗೂಳ, ಆಲಗೂರ, ಹುಣಶ್ಯಾಳ, ಕುದರಗುಂಡ ಸೇರಿದಂತೆ ಸುಮಾರು ೧೫-೨೦ ಹಳ್ಳಿಗಳಿಗೆ ಉತ್ತಮ ಸಂಪರ್ಕ ನೀಡುವ ಸಲುವಾಗಿ ರೈತರ ಅನುಕೂಲಕ್ಕಾಗಿ ಫೀಡರ್ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ವೇಳೆ ಕೆಇಬಿ ಕಿರಿಯ ಅಭಿಯಂತರ ಶಂಕರಗೌಡ ಬಿರಾದಾರ, ಶ್ರೀಮತಿ ಅಮೃತ ಜುಟ್ಟಿ, ಎಇ ಸುಬಾಸ ಸಜ್ಜನ, ಶರಣು ಸಜ್ಜನ, ನಾಗಪ್ಪ ಹಿಪ್ಪರಗಿ, ಮಂಜುನಾಥ ಕಲಕೇರಿ, ಶಿವು ಸಾತಿಹಾಳ, ರಮೇಶ ಅಡಕಿ, ಹಣಮಂತ ವಡ್ಡರ, ಅಂಬರೀಶ ಸಾಲವಾಡಗಿ, ಶರಣು ಮ್ಯಾಗೇರಿ, ಗಿರಿಶೇಖರ ಸಜ್ಜನ, ಅನ್ವರ ಯಾಳವಾರ, ಶಿವರಾಜ ದೊರೆಗೋಳ, ಸುನೀಲ ಪಾಟೀಲ, ಪ್ರವೀಣ ಜಗಶೆಟ್ಟಿ, ರಮೇಶ ಹೆಂಡಿ ಸೇರಿದಂತೆ ಇತರರು ಇದ್ದರು.