ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರವರು, ಆಲಮಟ್ಟಿ ಭೆಟ್ಟಿಯ ಸಂಧರ್ಭದಲ್ಲಿ ವಕೀಲರ ಕುರಿತು ಅವಹೇಳನಕಾರಿ ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.
ಆಲಮಟ್ಟಿ ಭೇಟಿಯ ಸಂಧರ್ಭದಲ್ಲಿ ಮತ್ತು ವಿಧಾನ ಸಭೆಯಲ್ಲಿಯೂ ಕೂಡಾ ಡಿಸಿಎಂ ಡಿ.ಕೆ. ಶಿವಕುಮಾರ ರವರು ವಕೀಲರ ಕುರಿತು ಅವಹೇಳನಕರವಾಗಿ ಮಾತನಾಡಿದ್ದು, ಅವರ ಹಗುರವಾದ ಮಾತು ಇಡೀ ವಕೀಲರ ಸಮುದಾಯಕ್ಕೆ ಅವಮಾನಕರವಾಗಿದ್ದು, ಆಗೌರವಯುತವಾದ ಮಾತುಗಳನ್ನು ಖಂಡಿಸಿ ನಮ್ಮ ಸಂಘವು ಕೊರ್ಟ ಕಲಾಸ, ಕಂದಾಯ ಇಲಾಖೆ ಮತ್ತು ಗ್ರಾಹಕರ ವೇದಿಕೆ ಈ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಲಾಯಿತು.
ಡಿಸಿಎಂ ಡಿ.ಕೆ. ಶಿವಕುಮಾರ ರವರು ವಕೀಲರ ಕುರಿತು ಅವಹೇಳನಕಾರಿ ಆಡಿದ ಮಾತನ್ನು ಹಿಂಪಡೆಯಬೇಕು. ಹಾಗೂ ವಕೀಲರ ಸಮುದಾಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷ ಧರೆಪ್ಪಗೌಡ ಬಿರಾದಾರ, ಉಪಾಧ್ಯಕ್ಷರಾದ ಸುನೀಲ ಬಿರಾದಾರ, ಕಾರ್ಯದರ್ಶಿ ಸುರೇಶ ಚೂರಿ, ಖಜಾಂಚಿ ಎಮ್. ಎ. ಕಾಖಂಡಕಿ, ಜಂಟಿ ಕಾರ್ಯದರ್ಶಿ ಯು.ಎಮ್. ಆಲಗೂರ, ವಾಯ್.ಬಿ. ಬಡಿಗೆರ, ಬಿ.ಡಿ. ಬಿರಾದಾರ, ವಿ.ಎಚ್. ಗೊಲ್ಲಾಳಪ್ಪಗೋಳ, ಎಮ್.ಆರ್. ಹವಾಲ್ದಾರ, ಪಿ.ಕೆ. ಹೂವಿನಗೋಳ, ಎಮ್.ಎಸ್. ಇನಾಮದಾರ ಮಹಿಳಾ ಸದಸ್ಯರಾದ ಎಸ್.ಎ.ಆಸಂಗಿ ಇನ್ನಿತರರು ಇದ್ದರು.