ಹಳಕಟ್ಟಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ಎ.ಗುಳೇದಗುಡ್ಡ ಬೇಟಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರೇ ಆಧಾರಸ್ತಂಭ. ಗುರುಬಳಗವೇ ಸ್ಪೂತಿ೯ದಾತರು. ಮೊಗ್ಗಿನ ಮನಸ್ಸುಗಳ ಶೈಕ್ಷಣಿಕ ಪ್ರಗತಿ ರೂಪಿಸುವಲ್ಲಿ ಗುರುದೇವೋಭವದ ಪಾತ್ರ ಹಿರಿದು ಎಂದು ಕನಾ೯ಟಕ ಸಮಗ್ರ ಶಿಕ್ಷಣ ವಿಜಯಪುರ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎಂ.ಎ.ಗುಳೇದಗುಡ್ಡ ಹೇಳಿದರು.
ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ಅನಿರೀಕ್ಷಿತ ಬೇಟಿ ನೀಡಿ ಮಾತನಾಡಿದ ಅವರು, ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರನ್ನು ತಿದ್ದಿ,ತೀಡಿ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು. ಆ ದಿಸೆಯಲ್ಲಿ ಕಲಿಕಾಸಕ್ತಿಯಿಂದ ದೂರಿರುವ ಮಕ್ಕಳಲ್ಲಿ ಓದಾಸಕ್ತಿ- ಬರಹಾಸಕ್ತಿ ಮೂಡಿಸಿ ಪ್ರೋತ್ಸಾಹಿಸಬೇಕು. ಓದುವ ಹವ್ಯಾಸ ಹಾಗೂ ಬರವಣಿಗೆ ಕೌಶಲ್ಯ ಮೂಡಿಸಿದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದರು.
ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಸಿಬ್ಬಂದಿ ಹಾಜರಾತಿ, ಪಠ್ಯ ಯೋಜನೆಯ ಮಕ್ಕಳ ಕಲಿಕಾ ಗುಣಮಟ್ಟ ಸೇರಿದಂತೆ ಶೈಕ್ಷಣಿಕ ಯೋಜನೆಗಳ ಅನುಷ್ಟಾನ ಪರಿಶೀಲಿಸಿದರು.
ಮಕ್ಕಳಲ್ವಿ ಬೆಂಚ್ ತಾರತಮ್ಯ ಭಾವನೆ ನೀಗಿಸಲು “U” ಶೇಪ್ ನಲ್ಲಿ ಶಾಲೆಯ ಕ್ಲಾಸ್ ರೂಮ್ ನಲ್ಲಿ ಸೀಟಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದ ಮಾತಿಗೆ ಎಂ.ಎ.ಗುಳೇದಗುಡ್ಡ ಮೆಚ್ಚುಗೆ ಸೂಚಿಸಿದರು.
ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಶಿಕ್ಷಕರಾದ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಜಿ.ಆರ್.ಜಾಧವ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಕರುಣಿಕ ಸತೀನ ಹೆಬ್ಬಾಳ ಇತರರಿದ್ದರು.