ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಬೆಳೆ ಪರಿಹಾರ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು, ಬಂಡಿ ದಾರಿ ರಸ್ತೆ ಸುಧಾರಣೆ ಹಾದಿ ಸಮಸ್ಯೆ , ಕಬ್ಬಿನ ವೈಜ್ಞಾನಿಕ ಬಂಬಲ ಬೆಲೆ, ರಾತ್ರಿ ಹೊತ್ತು ವಿದ್ಯುತ್ ಹಳೆಯ ರಾತ್ರಿ ಸಮಯದಲ್ಲಿ ತೋಟದ ಲೈನನ್ನು ರಾತ್ರಿ ನಿರಂತರ ವಿದ್ಯುತ್ ನೀಡಬೇಕು, ಅಕ್ರಮ-ಸಕ್ರಮ ಯೋಜನೆ ಪುನಾ ಜಾರಿಗೆ ತರುವುದು ಶೀಘ್ರ ಸಂಪರ್ಕ ಯೋಜನೆಯಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ, ಹಳೆಯ ಆರ್ ಆರ್ ನಂಬರ್ ೧೦೦೦೦ರೂಪಾಯಿ ಮತ್ತು ಹೊಸ ಆರ್ ಆರ್ ನಂಬರ್ ೧೫೦೦೦ರೂಪಾಯಿ ಶುಲ್ಕ ಪಾವತಿಸುವ ಆದೇಶ ಹಿಂಪಡೇಯಬೇಕು ,ವೈಶಾಲಿ ವಿಂಡ್ ಪವರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಗುಲಾಬ್ ರಾಮಚಂದ್ರ ಚವಾಣ್ ಕುಮಟಗಿ ಗ್ರಾಮದ ರೈತನಿಗೆ ದ್ರಾಕ್ಷಿ ಬೆಳೆಯ ನಷ್ಟದ ಪರಿಹಾರ ನೀಡದಿದ್ದ ವಿಂಡ್ ಪವರ್ ಕಂಪನಿಯ ವಿರುದ್ಧ ಹೋರಾಟ ರೈತರ ಬೆಳೆ ಸಾಲ ಮನ್ನಾ ಜೋಡತ್ತಿನ ರೈತರಿಗೆ ಪ್ರೋತ್ಸಾಹ ಧನ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ಸಿದ್ರಾಮ ಜಂಗಮಶೆಟ್ಟಿ, ಜಿಲ್ಲಾಗೌರವಾಧ್ಯಕ್ಷ ಬಾಪುಗೌಡ ಬಿರಾದಾರ, ಜಿಲ್ಲಾ ಉಪಾಧ್ಯಕ್ಷರು ಗುರಣ್ಣಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ ಹಿರೇಮಠ, ಸರಸ್ವತಿ ಬಿರಾದಾರ, ವಾಣಿಶ್ರೀ ಮುಳವಾಡ, ನಗರ ಘಟಕದ ಅಧ್ಯಕ್ಷ ದಾದಾಪೀರ ಮುಜಾವರ, ರೈತ ಚಿಂತಕರಾದ ಫಯಾಜ ಕಲಾದಗಿ, ತಿಕೋಟ ತಾಲೂಕಿನ ಅಧ್ಯಕ್ಷ ಈರಪ್ಪ ಕನ್ನಾಳ, ದೇವರಹಿಪ್ಪರಗಿಯ ತಾಲ್ಲೂಕಿನ ಅಧ್ಯಕ್ಷ ರಾಮು ದೇಸಾಯಿ, ಸಿಂದಗಿ ತಾಲ್ಲೂಕಾಧ್ಯಕ್ಷ ದಶರಥಸಿಂಗ ರಜಪೂತ, ಆಲಮೇಲ ತಾಲೂಕಿನ ಅಧ್ಯಕ್ಷರು ಮಹೀಬೂಬಸಾಬ ಸೌದಾಗರ, ತೋರವಿ ಗ್ರಾಮ ಘಟಕ ಅಧ್ಯಕ್ಷರು ದಸ್ತಗಿರ ಶ್ಯಾನವಾಲೆ, ಮುಳಸಾವಳಗಿ ಗ್ರಾಮ ಘಟಕದ ಅಧ್ಯಕ್ಷರು ಶರಣಗೌಡ ಬಿರಾದಾರ, ತೋರವಿ ರೈತ ಮುಖಂಡರು ಬೀರಪ್ಪ ಜುಮನಾಳ, ಬಸುಗೌಡ ಹೋನುಟಗಿ, ಗುಂಡು ಮಾಟಗಾರ, ಫಾರೂಕ ಇಮ್ಮಾರತವಾಲೆ, ಇಲಾಸ ಕುಮಟಿ, ಬಲಭೀಮ ಪಾರ್ಸನಳ್ಳಿ, ಅಶೋಕ ಗುತ್ತೆದಾರ, ಯಲ್ಲಾಲಿಂಗ ನಾಲತ್ವಾಡ, ಶೀವು ಯಾಳಗಿ, ನರೇಂದ್ರ ಇಂಡಿ, ಗುರು ಜಡಗೊಂಡ, ರಾವುತ ಅಗಸರ, ರಮೇಶ ಈಳಗೇರ ಮುಂತಾದವರು ಇದ್ದರು.