ಉದಯರಶ್ಮಿ ದಿನಪತ್ರಿಕೆ
ಇಂಡಿ: ಅತಿಥಿ ಉಪನ್ಯಾಸಕರ ನೇಮಕವಾಗದೆ ಇರುವದರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ , ಆದಷ್ಟೂ ಬೇಗ ಅತಿಥಿ ಉಪನ್ಯಾಸಕರ ನೇಮಕ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಬೆಳಿಗ್ಗೆ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಪಟ್ಟಣದ ಆಡಳಿತಸೌಧವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿದರು.
ಬಸ್ ನಿಲ್ದಾಣದ ಬಸವೇಶ್ವರ ಸರ್ಕಲ್ ನಲ್ಲಿ ಬರುತ್ತಿದ್ದಂತೆ ಟ್ರಾಫಿಕ್ ಜ್ಯಾಮ್ ಹೆಚ್ಚಾಯಿತು.
ಉಪವಿಭಾಗಾಧಿಕಾರಿ ಅವರ ಕಛೇರಿಗೆ ಆಗಮಿಸಿ ಪ್ರತಿಭಟನೆ ಮುಂದುವರೆಸಿದರು. ತಹಶಿಲ್ದಾರ ಅವರಿಗೆ
ಮನವಿ ಸಲ್ಲಿಸಿದ ನಂತರ ಮಾತನಾಡಿದ ವಿದ್ಯಾರ್ಥಿ ಮುಖಂಡ ಬಸವರಾಜ ಹಿರೇಕುರಬರ ‘ಕಳೆದ ಎರಡು ತಿಂಗಳಿಂದ ಸರಿಯಾಗಿ ನಮ್ಮ ತರಗತಿಗಳು ನಡೆಯುತ್ತಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಭೋದನೆ ಮಾಡುತ್ತಿದ್ದರು, ಅವರನ್ನು ಬಿಡುಗಡೆ ಮಾಡಿದ ದಿನದಿಂದ ತರಗತಿಗಳೇ ಸರಿಯಾಗಿ ನಡೆಯುತ್ತಿಲ್ಲ, ನಮ್ಮ ಪರೀಕ್ಷೆಗಳು ಸಮೀಪ ಬರುತ್ತಿದ್ದರಿಂದ ನಮಗೆ ಅನ್ಯಾಯವಾಗುತ್ತಿದೆ, ಆದಷ್ಟು ಬೇಗ ಸರಿಯಾಗಿ ಕ್ಲಾಸ್ ಗಳು ನಡೆಯುವಂತಾಗಬೇಕು ಎಂದು ಆಗ್ರಹಿಸಿದರು.
ವೈಷ್ಣವಿ ಮುಜಗೊಂಡ ಮಾತನಾಡಿ’ ಆದಷ್ಟು ಬೇಗ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ಈ ಸೆಮಿಸ್ಟರ್ ಅವಧಿಯ ಪಾಠಗಳು ಮುಗಿಯುವಂತೆ ಸರಕಾರ ಕ್ರಮಕೈಗೊಳ್ಳಬೇಕು ಎಂದರು.
ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಾದ
ಶಮೀರ್ ಕರೋಶಿ , ಯಾಸಿನ್ ಅಂಗಡಿ, ಸಿದ್ದು ಜೇವಣಗಿ,
ಶಬೀರ್ ನದಾಫ, ವೃತಿಕ ಹರವಾಳ, ಸದ್ದಾಂ ಚಪ್ಪರಬಂದ, ಕಾಶಿನಾಥ್ ನಾಯಕೋಡಿ, ಬಂದೇನವಾಜ್ ಶೇಖ
ಈರಣ್ಣ ಮಾದರ , ಮಹಮ್ಮದ ಯಾಸೀನ್ ತಾಂಬೆ, ಗೋವಿಂದ ವಡ್ಡರ, ದಿವ್ಯಾ ಬಿರಾದಾರ
ಜ್ಯೋತಿ ಸಿಂಗಾರೆ, ದಾನಮ್ಮ ಲಾಳಸೇರಿ, ಸಾವಿತ್ರಿ ಗುಬ್ಯಾಡ, ಸಲ್ಮಾ ಚಪ್ಪರಬಂದ, ಲಕ್ಷ್ಮಿ ಬಿರಾದಾರ, ಕಾವೇರಿ ತೆಲಸಂಗಿ ಮೊದಲಾವರು ಭಾಗವಹಿಸಿದ್ದರು.