ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಇ.ಸಿ.ಎಚ್ಎಸ್(Ex- Servicemen Contributory Health Scheme) ಮತ್ತು ಇ.ಎಸ್.ಐ.ಸಿ(Employees State Insurance Corporation) ವಿಮೆ ಅಡಿಯಲ್ಲಿ ನಗದು ರಹಿತವಾಗಿ ನಾನಾ ಕಾಯಿಲೆಗಳಿಗೆ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ಸೌಲಭ್ಯ ಪ್ರಾರಂಭವಾಗಿದೆ.
ಸೂಪರ್ ಸ್ಪೇಷಾಲಿಟಿ ಚಿಕಿತ್ಸೆಗಳಾದ ಹೃದಯ ರೋಗ, ನರರೋಗ, ಮೂತ್ರಪಿಂಡ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ, ಮೊಳಕಾಲು ಮಂಡಿ, ಸೋಂಟದ ಕೀಲು ಶಸ್ತ್ರಚಿಕಿತ್ಸೆ, ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಮೇಲಿನ ಎರಡು ಆರೋಗ್ಯ ವಿಮೆ ಸೌಲಭ್ಯಗಳು ಲಭ್ಯವಾಗಿವೆ.
ಈ ರೋಗಗಳಿಗೆ ಮೇಲಿನ ಯೋಜನೆಗಳ ಉಚಿತ ಸೌಲಭ್ಯ ಪಡೆಯಲು ಬಯಸುವ ಅರ್ಹ ಫಲಾನುಭವಿಗಳು ಸಂಭಂದಪಟ್ಟ ದಾಖಲಾತಿಗಳನ್ನು ಸಲ್ಲಿಸಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ಆಸ್ಪತ್ರೆಯ ವೈಧ್ಯಕೀಯ ಅಧಿಕ್ಷಕರಾದ ಡಾ. ಆರ್.ಎಂ. ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ. ನಂ. 9591682224 ಸಂಪರ್ಕಿಸಬಹುದಾಗಿದೆ.