ವಿಜಯಪುರದಲ್ಲಿ ನಡೆದ ಮಾಸಿಕ ಉಪನ್ಯಾಸ ಗೋಷ್ಠಿಯಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಸಮೂಹ ಮಾಧ್ಯಮಗಳ ಮಿತಿಮೀರಿದ ಪ್ರಭಾವದಿಂದ ಮತ್ತು ಮೋಬೈಲ್, ವ್ಯಾಟ್ಸಾಪ್, ಫೇಸ್‌ಬುಕ್, ಕಂಪ್ಯೂಟರ್ ಮತ್ತು ಟಿ.ವ್ಹಿ ಧಾರಾವಾಹಿಗಳ ಪ್ರಭಾವದಿಂದ ನಮ್ಮ ಜೀವನ, ಸಂಸ್ಕೃತಿ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ನವರಸಪುರದ ಸೇನಾ ನಗರದ ಶಿವಾಲಯದಲ್ಲಿ ಸೋಮವಾರ ದಂದು ‘ಬೆಳದಿಂಗಳ ಬೆಳಕಿನೆಡೆಗೆ” ಮಾಸಿಕ ಉಪನ್ಯಾಸ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಕೇವಲ ಹಣ ಗಳಿಕೆಯತ್ತ ಸಾಗುತ್ತಾ ಸಂಸಾರವೆಂಬ ಸಾಗರದಲ್ಲಿ ಎಲ್ಲದಕ್ಕೂ ನಾನು, ನನ್ನದು ಮತ್ತು ನನ್ನಿಂದ ಎಂಬ ಮಮಕಾರಗಳಿಂದ ನಾವು ಇಂದು ಧಾರ್ಮಿಕ, ನೈತಿಕ ಮತ್ತು ಮೌಲ್ವಿಕ ಚಿಂತನೆಗಳಿಲ್ಲದೇ ಜೀವನವನ್ನು ವೃಥಾ ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ನಾವೆಲ್ಲರೂ ಇಂದು ಸಂಸಾರವೆಂಬ ಭವಸಾಗರದಿಂದ ಹೊರಬಂದು ನಿಜಗುಣ ಶಿವಯೋಗಿಗಳ ಅಮೃತವಾಣಿ “ಕೆಡುವ ಶರೀರ ಸಾಫಲ್ಯವಾಗುವುದು-ಪರರ ಹಿತ” ಎಂಬಂತೆ ಸನ್ಮಾರ್ಗದ ದಾರಿ ಕಂಡುಕೊಂಡು ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯುತವಾಗಲು ಇಂತಹ ಸತ್ಸಂಗ ಭಾಗವಹಿಸಿ ಶರಣರ ಜೀವನಾದರ್ಶಗಳನ್ನು ಅರಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಇನ್ನೊರ್ವ ಅತಿಥಿ, ಪ್ರಸಿದ್ಧ ಭಜನಾಕಾರ ವಿಠ್ಠಲ ಕನಮಡಿ ಅವರು “ಮಾನವನ ಸಾರ್ಥಕ ಬದುಕಿಗೆ ಶರಣರ ಮತ್ತು ಧಾರ್ಮಿಕ ಚಿಂತನೆಗಳು” ವಿಷಯ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಧಕ ವಿಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಎಂ.ಎಸ್.ಖೊದ್ನಾಪೂರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಜೆ.ಕೋಟ್ಯಾಳ ಮತ್ತು ದೇವಸ್ಥಾನದ ನಿರ್ದೇಶಕ ಎಂ.ಎಸ್.ಪತ್ತಾರ ಮಾತನಾಡಿದರು.
ವೇದಿಕೆಯ ಮೇಲೆ ದೇವಸ್ಥಾನ ನಿರ್ದೇಶಕಿ ಮಂಜುಳಾ ನಿಂಬಾಳಕರ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಿವಾಲಯ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಉಪಾಧ್ಯಕ್ಷ ಬಿ.ಡಿ.ಕಡಕೋಳ, ಪ್ರೊ. ಬಿ.ವ್ಹಿ.ಕುಂಬಾರ, ನಿಂಗಪ್ಪ ನಿಂಬಾಳಕರ, ಡಾ. ರಾಜಕುಮಾರ ಜೊಲ್ಲೆ, ರಾಜಶೇಖರ ಉಮರಾಣಿ, ವಿಠ್ಠಲ ಜಗತಾಪ, ಪ್ರೊ. ಬಿ.ಎಸ್.ಬೆಳಗಲಿ, ಬಸಯ್ಯಶಾಸ್ತ್ರಿ ಮಠಪತಿ, ಶಿವಯೋಗೆಪ್ಪ ಹತ್ತಿ, ಲಕ್ಷ್ಮಿ ದೇವಸ್ಥಾನದ ಕಾರ್ಯದರ್ಶಿ ಶೋಭಾ ಚವ್ಹಾಣ, ಆರ್.ಎಸ್.ಕಪಾಳಿ, ಅಲ್ಲಮಪ್ರಭು ಶಿರಹಟ್ಟಿ, ಸಾಬು ಅಗ್ರಾಣಿ, ಶಾಂತಾ ಕಪಾಳಿ, ಪ್ರೊ. ಸುನೀತಾ ವಳಸಂಗ, ಪ್ರಫುಲ ನಿಂಬಾಳಕರ ಇನ್ನಿತರರು ಉಪಸ್ಥಿತರಿದ್ದರು.
ಶಕುಂತಲಾ ಅಂಕಲಗಿ ಪ್ರಾರ್ಥಿಸಿದರು. ಗುರುಬಸಯ್ಯ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಸವರಾಜ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಉಮರಾಣಿ ವಂದಿಸಿದರು.