ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರವಾಹದಿಂದ ಮತ್ತು ತಾಲೂಕಿನಲ್ಲಿ ಆಗಷ್ಟ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದ ಹಾನಿಗೊಂಡಿರುವ ವಿವಿಧ ಬೆಳೆಗಳನ್ನು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ರೈತರ ಆಕ್ಷೇಪಣೆಗೆ ೭ ದಿನಗಳ ಅವಕಾಶ ನೀಡಲಾಗಿದೆ.
ಕೃಷಿ/ತೋಟಿಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಬೆಳೆ ಹಾನಿಯ ಜಂಟಿ ಸಮೀಕ್ಷೆ ಮಾಡಿದ್ದು, ಹಾನಿಗೊಳಗಾದ ರೈತರ ಸಮೀಕ್ಷಾ ವರದಿಯನ್ನು ಚಡಚಣ ತಾಲ್ಲೂಕಿನ ೪೨ ಗ್ರಾಮಗಳಲ್ಲಿ ಮಾಡಿರುವ ಬೆಳೆ ಹಾನಿಯ ಸಮೀಕ್ಷೆಯ ವರದಿಯನ್ನು, ತಾಲೂಕಿನ ೧೩ ಗ್ರಾಮ ಪಂಚಾಯತಿ ಕಟ್ಟಡಗಳು ಹಾಗೂ ಗ್ರಾಮ ಛಾವಡಿ ಮುಂದೆ ಎದ್ದು ಕಾಣುವ ರೀತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಜಂಟಿ ಸಮಿಕ್ಷೆ ವರದಿಯನ್ನು ಅಳವಡಿಸಲಾಯಿತು ಹಾಗೂ ರೈತರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ರೈತರು ೭ ದಿನಗಳೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ಚಡಚಣ ತಹಶೀಲದಾರ ಕಛೇರಿ ಇವರಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಅವಧಿ ಮುಗಿದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ನಿಗದಿತ ಅವಧಿಯಲ್ಲಿ ರೈತರು ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಿ, ಸ್ವೀಕೃತಿ ಪಡೆದುಕೊಳ್ಳಬೇಕು ಎಂದು ತಹಶೀಲದಾರ ಸಂಜಯ ಇಂಗಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.