ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಾ ಮಾನವತಾವಾದಿಯಾಗಿ, ಸಮಾಜದ ಕಣ್ಣರಳಿಸಿದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರು ಸಾರ್ವಕಾಲಿಕವಾಗಿ ಶ್ರೇಷ್ಠರೇನಿಸಿದ್ದಾರೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾನುವಾರ ನಾರಾಯಣಗುರು ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು. ಕೇರಳದಲ್ಲಿ ಜನಿಸಿದ ಇವರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಶಂಕರಾಚಾರ್ಯರ ಅದ್ವೈತ ಸಾರದಲ್ಲಿ ತಮ್ಮ ದಾರ್ಶನಿಕತೆ ಪ್ರತಿಪಾದಿಸಿ ಎಲ್ಲರನ್ನೂ ಒಂದಾಗಿ ಕಂಡ ಮಹಾನುಭಾವರೆನಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ.ಬಿರಾದಾರ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸಾಮಾಜಿಕ ಸಮಾನತೆಯ ಹರಿಕಾರ, ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ. ದೇಶ ಸೇವೆಯೇ ಈಶ ಸೇವೆ ಎಂದು ಸಾರಿದ ಸ್ತ್ರೀ ಸಮಾನತೆಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣಗುರು ಇವರ ಆದರ್ಶಗಳು ಮತ್ತು ಸಂದೇಶಗಳು ನಮಗೆ ದಾರಿದೀಪಗಳಾಗಿವೆ ಎಂದರು.
ಗ್ರಾಮ ಆಡಳಿತಾಧಿಕಾರಿ ಅನೀಲ ರಾಠೋಡ, ರಮೇಶ ಈಳಗೇರ, ರಾವುತ ಅಗಸರ ಸಿಬ್ಬಂದಿ ಚನ್ನಬಸು ಹೊಸಮನಿ, ಕಿಶೋರ ರಾಠೋಡ, ರಮಾನಂದ ಚಕ್ಕಡಿ, ರವಿ ಮೆಟಗಾರ,ರಾಜು ಕಂಠಿ, ಎಸ್.ಎ.ದಳಪತಿ ಸೇರಿದಂತೆ ಇತರರು ಇದ್ದರು.