ಉದಯರಶ್ಮಿ ದಿನಪತ್ರಿಕೆ
ಇಂಡಿ: ಸ್ವಾತಂತ್ರೋವದಲ್ಲಿ ಪರಕೀಯರನ್ನು ಹೊರಗಟ್ಟಲು ಅಸ್ತçವಾಗಿ ಭಾರತೀಯರನ್ನು ಸಂಘಟಿಸಲು ಆರಂಭವಾದ ಸಾರ್ವಜನಿಕ ಗಣೆತೋತ್ಸವ ಈಗ ಪ್ರತಿ ಹಳ್ಳಿಗಳಿಂದ ಹಿಡಿದು ದೇಶದೆಲ್ಲೆಡೆ ಆರಾಧಿಸಲ್ಪಡುತ್ತಿದೆ. ಎಂದು ಶಾಶಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ವತಿಯಿಂದ ನಡೆದ ಗಣೇಶ ವಿಸರ್ಜನೆ ಹಾಗೂ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯ ಕ್ರಮ ಮದಲ್ಲಿ ಮಾತನಾಡಿದರು.
ಜನರಲ್ಲಿ ಭಕ್ತಿ ಭಾವನೆ ಬೆಳೆಸಲು ಗಣೇತೋತ್ಸವ ಸಹಕಾರಿ, ಬಸವರಾಜೇಂದ್ರ ದೇವಸ್ಥಾನದ ಗಣೇತೋತ್ಸವ ಎಲ್ಲ ಜಾತಿ ಧರ್ಮದವರನ್ನು ಒಳಗೊಂಡು ಮಾದರಿಯಾಗಿ ನಡೆಯುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಮಾತನಾಡಿದರು.
ಪುರಸಭೆ ಸದಸ್ಯ ಸುಧೀರ ಕರಕಟ್ಟಿ, ವಿಶಾಲ ಸಿಂದಗಿ, ಗೀರಿಶ ಪೋಪಡಿ, ಆರ್.ವಿ.ಪಾಟೀಲ, ಸೋಮುಸುರಪುರ, ಮತ್ತಿತರಿದ್ದರು.
ಇದೇ ವೇಳೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.