ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಶಿಕ್ಷಕ ವೃತ್ತಿ ಬಲು ದೊಡ್ಡದು, ಅದರ ಘನತೆಯನ್ನು ಕಾಪಿಟ್ಟುಕೊಳ್ಳುವವನೇ ನಿಜವಾದ ಶಿಕ್ಷಕ ಎಂದು ಪ್ರಾಚಾರ್ಯ ವೀರಭದ್ರ ಗೋಲಾ ಹೇಳಿದರು.
ಅವರು ತಾಲ್ಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಬೈಲ್ ಯುಗದಲ್ಲಿ ಪಠ್ಯಗಳು ಮಾಯಾವಾಗುತ್ತಿರುವುದು ಶೋಚನೀಯ ಸಂಗತಿ, ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲರಾಗಲು ಪುಸ್ತಕಗಳು ಸಹಾಯ ಮಾಡುತ್ತವೆ, ಮೊಬೈಲನಿಂದ ದೂರವಿದ್ದು ಪಠ್ಯಮತ್ತು ಸಾಂಸ್ಕೃತಿಕವಾಗಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ಪಾಟೀಲ ನೆರವೇರಿಸಿ ಮಾತನಾಡಿದರು.
ಆಲಮೇಲ ಬೆರಗು ಪ್ರಕಾಶನದ ಸಂಚಾಲಕ ರಮೇಶ ಕತ್ತಿ ಮಾತನಾಡಿ, ‘ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಗಟ್ಟಿಗೊಳಿಸಲು ಆದರ್ಶತನ, ಪ್ರಾಮಾಣಿಕತೆಗಳು ಇಬ್ಬರಲ್ಲೂ ಬರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿರ್ಥಿಗಳಾಗಿ ಪ್ರೊ. ಎಸ್.ಎಂ.ಹರನಾಳ, ಪ್ರೊ. ಆರ್.ವೈ.ಕಂಬಾರ, ಪ್ರೊ. ವಿ.ಎಸ್.ಶಾ ಹಾಪೂರ, ಡಾ. ಐ.ಜಿ.ಕೋಣಸಿರಸಗಿ ಮಾತನಾಡಿದರು.
ಸಂಸ್ಥೆಯ ಶಿಕ್ಷಕಿ ಆರ್ ವೈ ಚೌಗಲೆ ಮತ್ತು ಮಾಲಾಶ್ರೀ ಮಂದೇವಾಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನೀಯರಾದ ಸಂಗೀತಾ ದುದ್ದಗಿ, ಜಯಶ್ರೀ ನಡುವಿನಮನಿ ಯಶೋಧಾ ಮುಡೇ ಮಾತನಾಡಿದರು.
ಗೌರಿ ಶಾಬಾದಿ, ತ್ರಿವೇಣಿ, ವಿದ್ಯಾಶ್ರೀ ಪ್ರಾರ್ಥಿಸಿದರು. ಪ್ರತಿಭಾ ದುದ್ದಗಿ ಸ್ವಾಗತಿಸಿದರು. ಐಶ್ವರ್ಯ ತಳವಾರ ನಿರೂಪಿಸಿದರು. ಶಾಂತಾಬಾಯಿ ದುದ್ದಗಿ ವಂದಿಸಿದರು.