ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಶಿಕ್ಷಕರನ್ನು ಸ್ಮರಿಸಿ ಗೌರವಿಸುವುದರ ಜೊತೆಗೆ ಅವರ ಮಾರ್ಗದರ್ಶನ ಪಡೆದಲ್ಲಿ ನೀವು ಜಗತ್ತು ಬೆಳಗುವ ತಾರೆಗಳಾಗುತ್ತೀರಿ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಜೆಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ.ಬಿ.ಕೋರಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಶಿಕ್ಷಣ ಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಬಂದ ಮಗುವನ್ನು ಕೈ ಹಿಡಿದು ದಡ ಸೇರಿಸುವ ಅವರ ಬದುಕು ಬೆಳಗಿಸುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿಕ್ಷಕ. ಶಿವ ಪಥವನ್ನು ಅರಿಯಬೇಕಾದರೆ ನಮ್ಮ ಜೊತೆ ಗುರು ಇರಬೇಕು. ಮುಂದೆ ಗುರಿ, ಹಿಂದೆ ಗುರು ಇದ್ದರೆ ಅಸಾಧ್ಯವಾದದ್ದನ್ನು ಸುಲಭ ಸಾಧ್ಯವಾಗಿಸಬಹುದು ಎಂದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ, ಇಂದು ಶಿಕ್ಷಕರ ಜವಾಬ್ದಾರಿ ಹೆಚ್ಚಾಗುತ್ತಿದೆ. ಒತ್ತಡದ ನಡುವೆಯೂ ನಾವು ವಿದ್ಯಾರ್ಥಿಗಳಿಗೆ ಶಿಕ್ಷಣ, ಮಾರ್ಗದರ್ಶನ ನೀಡಿ ಅವರ ಬದುಕು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ.ಎಚ್.ದೊಡಮನಿ ಮಾತನಾಡಿದರು.
ಈ ವೇಳೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀ¯,ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ ಕೆ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಐ ಎಸ್. ಹೂಗಾರ, ಡಾ.ಗಿರೀಶ ಹಣಮರೆಡ್ಡಿ, ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಬಿ ಬಿರಾದಾರ,ಪ್ರೊ.ಎನ್ ಕುನ್ನೂರ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ, ಡಾ.ತರನ್ನುಮ್ ಜಬೀನ್‌ಖಾನ, ಪ್ರೊ.ರೂಪಾ ಮೋಟಗಿ, ಪ್ರೊ.ರೇಣುಕಾದೇವಿ ಕಮತರ, ಪ್ರೊ.ಶ್ರೀಧರ ಜೋಶಿ, ಡಾ.ಉಷಾದೇವಿ ಹಿರೇಮಠ, ಡಾ.ಎಂ.ಬಿ ಪಾಟೀಲ, ಪ್ರೊ.ಭಾರತಿ ಕಾರಕಲ, ಡಾ.ರಾಜೇಶ್ವರಿ ಪುರಾಣಿಕ, ಪ್ರೊ.ಸವಿತಾ ಕನಕರೆಡ್ಡಿ, ಪ್ರೊ.ಅಕ್ಷಯ ಜನಾಯ್, ಡಾ.ಮಂಜುನಾಥ ಜ್ಯೋತಿ, ಡಾ.ಎಸ್ ಎಂ ಉಂಕಿ, ಡಾ.ಎಸ್ ಡಿ ಲಮಾಣಿ, ಡಾ.ಅಮಿತ ತೇರದಾಳೆ, ಡಾ.ಧಾನೇಶ್ವರಿ ಮೂಲಿಮನಿ,ಪ್ರೊ ವಿದ್ಯಾ ಪಾಟೀಲ, ಪ್ರೊ.ಮಲಿಕ್ ಎಲ್ ಜಮಾದಾರ, ಡಾ.ರಾಮಚಂದ್ರ ನಾಯಕ,ಪ್ರೊ.ಆರ್ ಡಿ. ಜೋಶಿ, ಪ್ರೊ.ಎಂ.ಎಸ್ ಜೇವೂರ,ಪ್ರೊ.ಮಾಲತಿ ಚನಗೊಂಡ, ಡಾ.ಧರ್ಮಗುರು ಪ್ರಸಾದ, ಪ್ರೊ.ಎಸ್ ವಾಯ್ ಅಂಗಡಿ, ಪ್ರೊ.ಅನೀಶ ಜಮಖಂಡಿ ಪ್ರೊ.ಶರಣಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರೊ.ಐ ಎಸ್ ಹೂಗಾರ ಸ್ವಾಗತಿಸಿದರು, ಪ್ರೊ.ಸಿ.ಎನ್ ಕುನ್ನೂರ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ಜೆ.ಬಿ ಬಿರಾದಾರ ವಂದಿಸಿದರು.