ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾನುವಾರ ರಾತ್ರಿ ನಡೆದ ರಾಹುಗ್ರಸ್ತ ಚಂದ್ರಗ್ರಹಣ ನಿಮಿತ್ಯ ಅಂದು ರಾತ್ರಿ 9:55 ರಿಂದ 1. 25 ರವರೆಗೆ B.L.D.E ಟೀಚರ್ಸ್ ಕಾಲೋನಿ ಬಿ .ಎಂ ಪಾಟೀಲ್ ನಗರದ ಶಿವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಅಶುಭ ಫಲ ಇರುವ ರಾಶಿಯವರಿಗೆ ಶುಭ ಫಲವನ್ನು ಬಯಸಿ ಸಂಕಲ್ಪಿಸಿ ವೇ.ಮೂ ಫಕೀರಯ್ಯ ಶಾಸ್ತ್ರಿ ಹಾಗೂ ವೇ.ಮೂ ಸಿದ್ದರಾಮಯ್ಯ ಶಾಸ್ತ್ರಿ ಇವರ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಜಪವನ್ನು ಬಡಾವಣೆಯ ಸದ್ಭಕ್ತರೊಂದಿಗೆ ನಡೆಸಲಾಯಿತು.
ನಂತರ ಸೋಮವಾರ ಗ್ರಹಣ ಮೋಕ್ಷದ ನಂತರ ಮಹಾಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ ನೆರವೇರಿಸಿ ಸಮಾಜದ ಒಳಿತಿಗಾಗಿ ಹಾಗೂ ಆಯುಷ್ಯ ಆರೋಗ್ಯ ಅಭಿವೃದ್ಧಿಗಾಗಿ ಮಹಾ ಮೃತ್ಯುಂಜಯ ಹೋಮವನ್ನು ಮಾಡಲಾಯಿತು. ಬಡಾವಣೆಯ ಹಾಗೂ ಸುತ್ತಮುತ್ತಲಿನ ಎಲ್ಲ ಸದ್ಭಕ್ತರು ಈ ಮಹತ್ತರ ಕಾರ್ಯದಲ್ಲಿ ಪಾಲ್ಗೊಂಡು ಮೃತ್ಯುಂಜಯನ ಕೃಪೆಗೆ ಪಾತ್ರರಾಗಿ ಪುನೀತರಾಗಿದ್ದಾರೆ. ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಶಿವನಗೌಡ ಬಿರಾದಾರ ಕನಾಳ ಸೇರಿದಂತೆ ಸ್ಥಳಿಯ ಮುಖಂಡರು, ಗಣ್ಯರು ಭಾಗಿಯಾಗಿದ್ದರು.