ದೇವರಹಿಪ್ಪರಗಿ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಿಕ್ಷಕರೇ ನಾಡಕಟ್ಟುವ ಶಿಲ್ಪಿಗಳು ಜೊತೆಗೆ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾತೃಗಳು ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್.ಬಸವರೆಡ್ಡಿ ಹೇಳಿದರು.
ಪಟ್ಟಣದ ಹೊಸನಗರದಲ್ಲಿ ಶುಕ್ರವಾರ ಸರ್ವೋದಯ ಶಿಕ್ಷಣ ಸಂಸ್ಥೆಯಡಿಯ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಭಾವಂತ ಮಕ್ಕಳೇ ದೇಶದ ನಿಜವಾದ ಸಂಪತ್ತು ಎಂದರು.
ಸಂಸ್ಥೆಯ ಸಂಸ್ಥಾಪಕ ಎನ್.ಬಿ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಮಕ್ಕಳೇ ಆಯೋಜಿಸಿ, ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವೇದಿಕೆಯ ಮೇಲೆ ಹೂಮಾಲೆ, ಪುಷ್ಪಗುಚ್ಛ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಹಸನ್‌ಸಾಬ್ ಶಿಕ್ಷಕ ಸಿಬ್ಬಂದಿಗಳಾದ ಅಕೀಲ್ ನಾಗಾವಿ, ನಿಂಗಣ್ಣ ಹರಿಜನ, ವಿನೋದಕುಮಾರ ಬೆಳ್ಳಿಕಟ್ಟಿ, ಮಾಳು ಪೂಜಾರಿ, ಜ್ಯೋತಿ ಬಾಗೇವಾಡಿ, ಸೌಭಾಗ್ಯ ದೇಸಾಯಿ, ಅಶ್ವಿನಿ ಹೆಬ್ಬಾಳ, ಅಶ್ವಿನಿ ನಾಗರಬೆಟ್ಟ, ಮಹಾಲಕ್ಷ್ಮಿ ಗೊಡ್ಯಾಳ, ಶ್ರೀದೇವಿ ಬಾಗೇವಾಡಿ, ಲಕ್ಷ್ಮಿ, ರೇಣುಕಾ ಬಗಲಿ, ಶಶಿಕಲಾ ದೇಸಾಯಿ ಇದ್ದರು.