ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ಯವಾಗಿ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಮುಸ್ಲಿಂ ಸಮಾಜದ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ನಗರದ ವಿವಿಧೆಡೆ ಹಸಿರುಧ್ವಜಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಮಹ್ಮದ ಪೈಗಂಬರ ಅವರ ಕುರಿತ ಗುಣಗಾನ ಮಾಡಿದರು.
ಮುಂಜಾನೆ 9 ಗಂಟೆಯ ಶಾಹ್ ಆಲ್ಂ ಗೇಟ ಹತ್ತಿರ ಮೆರವಣಿಗೆಗೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಮೌಲಾನಾ ಅಬುಸಾಲಿಯಾಸಾ, ಮಲಾನಾ ಖುಷ್ಟುದಿನ್ನ ಬಿಜಾಪುರ, ಮೌಲಾನಾ ಶಿರಸಂಗಿ, ಮಾಮೂನರಸೀಧ ಪಾರರ್ಥನಳ್ಳಿ, ತೌಪೀಕ್ ಪಾರಥನಳ್ಳಿ, ರಿಯಾಜ ಅವಟಿ, ನಜೀರ ಕಂಗನೋಳ್ಳಿ, ನಗರಸಭೆ ಸದಸ್ಯ ಮುಬಾರಕ ಅಪರಾಧ, ಮೌಲಾನಾ ಜುನೆದ ರಜಾ, ನಗರ ಯೋಜನೆ ಪ್ರಾಧಿಕಾರ ಅದ್ಯಕ್ಷ ಅನ್ವರ ಮೋಮಿನ, ರಫಿಕ್ ಬಾರಿಗಡ್ಡಿ, ಸುಶಿಲಕುಮಾರ ಬೆಳಗಲಿ, ನ್ಯಾಯವಾದಿ ಶಶಿಕಾಂತ ದೊಡಮನಿ, ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ, ಸಿಪಿಐ ಮಲ್ಲಪ್ಪಮಡ್ಡಿ, ಪಿ.ಎಸ್.ಐ ಅನೀಲ ಕುಂಬಾರ. ಬಕರ ಕುಡಚಿ ಸಾದೀಕ್ ಬಂಟನೂರ, ಮುಸ್ತಾಕ್ ಝಂಡೆ ಸೇರಿದಂತೆ ಅನೇಕರು ಮೆರವಣಿಗೆಗೆ ಸಾಥ ನೀಡಿದರು.
ಮೆರವಣಿಗೆಯುದ್ದಕ್ಕೂ ಹಲವು ಸಂಘಸಂಸ್ಥೆಗಳು ಪಾನಕ, ಸಿಹಿ ಹಾಗೂ ಹಣ್ಣುಗಳನ್ನು ವಿತರಣೆ ಮಾಡಿದರು.
ಶಾಹ್ ಆಲ್ಂ ಗೇಟದಿಂದ ಮೆರವಣಿಗೆ ಪ್ರಾರಂಭವಾಗಿ, ಬಾಗಸೆ ಗಲ್ಲಿ, ಹನುಮಾನ್ ಚೌಕ, ಪೋಸ್ಟ್ ಚೌಕ, ಅಶೋಕ ವೃತ್ತ, ಜೋಳದ ಬಜಾರ್, ಟಿಪ್ಪು ಸುಲ್ತಾನ ವೃತ್ತ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಮುಧೋಳ ರಸ್ತೆಯ ಅರ್ಸೆದಮಡಿ ಈದ್ದಾ ಮೈದಾನದಲ್ಲಿ ಸಮಾರೂಪ ಗೊಂಡಿತ್ತು.