ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಝಳಕಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸನ್೨೦೨೫-೨೬ನೇ ಸಾಲಿನ ಸಂಸ್ಕೃತಿಕ ಕ್ರೀಡೆ, ರಾ. ಸೇ. ಯೋ, ರೇಡ್ ಕ್ರಾಸ್, ಸ್ಕೌಟ್ & ಗೈಡ್ಸ್ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಬಿ.ಎ., ಬಿ.ಕಾಮ್., ಬಿ.ಎಸ್.ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಉದ್ಘಾಟನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ್ ಜ್ಯೋತಿಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ಬೇಕಾಗುವ ಶಿಕ್ಷಣ ಕೊಡೊದು ಶಿಕ್ಷಕರ ಕರ್ತವ್ಯ, ಅದನ್ನ ಉಪಯೋಗ ಪಡಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸೋದು ವಿದ್ಯಾರ್ಥಿಗಳ ಆದ್ಯಕರ್ತವ್ಯ ಎಂದರು, ನಮ್ಮ ಹಿರಿಯರು ಶಾಲಾ, ಕಾಲೇಜುಗಳಿಗೆ ದೇವಸ್ಥಾನ ಎಂದು ಶಿಕ್ಷಕರಿಗೆ ದೇವರು ಎಂದು ವಿದ್ಯಾರ್ಥಿಗಳಿಗೆ ಪೂಜಾರಿ ಸ್ಥಾನ ಕೊಟ್ಟಿರೋದು ಸುಮ್ಮನೆ ಅಲ್ಲ, ಶಾಲೆ ಮಠ ಮಾನ್ಯಗಳಿಗಿಂತ ದೊಡ್ಡದು, ಅದಕ್ಕಾಗಿ ಇವತ್ತು ಜಿಲ್ಲೆಯಲ್ಲಿ ಇರುವಂತಹ ಉನ್ನತ ಮಟ್ಟದ ಶಾಲಾ ಕಾಲೇಜುಗಳು ನಮ್ಮ ಇಂಡಿ ತಾಲೂಕಿನಲ್ಲಿ ಇರೋದು ನಮ್ಮ ಪುಣ್ಯ ಇದಕ್ಕೆಲ್ಲ ಕಾರಣ ನಮ್ಮ ಸರ್ಕಾರದ ಸಾಧನೆ ಎಂದರು.
ಜಿಲ್ಲೆಯಲ್ಲಿ ಇರುವಂತಹ ಕಾಲೇಜು ತಾಲೂಕಿನಲ್ಲಿವೆ, ತಾಲೂಕಿನಲ್ಲಿ ಇರುವಂತಹ ಕಾಲೆಜು ಝಳಕಿ ಎಂಬ ಗ್ರಾಮದಲ್ಲಿವೆ ಇದು ಹೆಮ್ಮೆಯ ವಿಷಯ, ಆದ್ದರಿಂದ ನಾವು ಯಾವತ್ತೂ ಯಾವುದೇ ಧರ್ಮಕ್ಕಾಗಲಿ, ಸಮುದಾಯಕ್ಕಾಗಲಿ ಅವಹೇಳನಕಾರಿ ಮಾತುಗಳ ಉಪಯೋಗ ಬೇಡಾ, ಧರ್ಮಸ್ಥಳದ ಸಂಗತಿ ನಮಗೆ ನೋವುಂಟು ಮಾಡಿದೆ ಇದಕ್ಕೆ ಕಾರಣ ನಮ್ಮಲ್ಲಿನ ಬುದ್ಧಿ, ಶಿಕ್ಷಣದಮಹತ್ವ ತಿಳಿಯದ ವ್ಯಕ್ತಿಗೆ ಎಲ್ಲವು ಒಂದೆ ಸಮಾನ ಎಂದು ಕಳವಳ ವ್ಯಕ್ತ ಪಡಿಸಿದರು.
ನಾದ ಕೆ. ಡಿ ಪ್ರೌಢಶಾಲೆ ಮುಖ್ಯ ಗುರು ಮಾತನಾಡಿ, ವಿದ್ಯೆ ಎನ್ನೋದು ಕೇವಲ ಅಂಕಗಳ, ಪ್ರಮಾಣ ಪತ್ರಗಳ ಕಾರ್ಖಾನೆ ಅಲ್ಲ, ಇದು ವಿದ್ಯಾರ್ಥೀಗಳ ಸಾಧನೆ, ಶಾಲಾ ಕಾಲೇಜ್ ಗಳಲ್ಲಿ ಸಂಸ್ಕೃತಿ, ನಡುವಳಿಕೆ, ಸಂಸ್ಕಾರಗಳ ಉದ್ಭವ ಸ್ಥಾನ, ಇದನ್ನು ಪೂಜಿಸಿದಾಗ ಮಾತ್ರ ಪ್ರಗತಿ ಸಾಧ್ಯ, ನಮ್ಮ ಭೀಮೆಯ ಒಡಲು ಎಷ್ಟೋ ಕವಿಗಳಿಗೆ, ಕಲಾವಿದರಿಗೆ, ಕೃತಿಗಳಿಗೆ, ಸಾಧು-ಸಂತರಿಗೆ ಜನ್ಮ್ ನೀಡಿದ ಪುಣ್ಯ ಭೂಮಿ ಇಂತಹ ಭೂಮಿಯಲ್ಲಿ ಹುಟ್ಟಿರೋದು ನಮ್ಮ ಪುಣ್ಯ, ಅದರಲ್ಲು ಒಂದು ಸಮಯದಲ್ಲಿ ಝಳಕಿ ಏನೋ ಇತ್ತು ಇವತ್ತು ಶಿಕ್ಷಣ ಕಾಶಿಯನ್ನಾಗಿ ನಮ್ಮ ಶಾಸಕರು ನಿರ್ಮಾಣ ಮಾಡಿದ್ದಾರೆ ಇದಕ್ಕೆಲ್ಲ ಅಭಿನಂದನೆ ಗೌರವಗಳು ಅವರಿಗೆ ಸಲ್ಲುತ್ತವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಸದಸ್ಯರು ಅಣ್ಣಪ್ಪ ತಳವಾರ, ಮಾಜಿ ಗಾ.ಪಂ.ಅಧ್ಯಕ್ಷರು ಶ್ರೀಮಂತ ಕಾಪಸೆ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ವಿವೇಕಾನಂದ ಉಘಾಡೆ ಮಾತನಾಡಿ ತಮ್ಮ ಅಭಿಪ್ರಾಯ ತಿಳಿಸಿದರು.
ನಾರಾಯಣ ಜಹಾಗಿರದಾರ, ಶಿವಲಿಂಗ ತುಪ್ಪದ, ಶಂಕರ ಬಿರಾದಾರ, ಹಣಮಂತ ಕೋಳಿ, ಡಾ. ಸಂತೋಷ ದಂಡ್ಯಾಗೋಳ, ರವಿಕುಮಾರ್ ಹೂಗಾರ,ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

