ಸಿಟಿ ಸರ್ವೇ ವ್ಯಾಪ್ತಿಯಲ್ಲಿ ಬರದಿದ್ದರೂ ಪ.ಪಂ.ನಿಂದ ಶೇ.40 ಉತಾರೆ ಹಂಚಿಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಇತ್ತೀಚಿಗೆ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಡೈಮಂಡ ಪಾರ್ಕ ಸಂಪೂರ್ಣ ಕಾನೂನ ಬಾಹೀರವಾಗಿ ನಿರ್ಮಿಸಲಾಗಿದೆ ಎಂದು ಸೋಮಶೇಖರ ಚನ್ನಪ್ಪ ಪಟ್ಟಣಶೆಟ್ಟಿ ಆರೋಪಿಸಿದ್ದಾರೆ.
ಪಟ್ಟಣವು ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದಜೆಗೇರಿ ಸುಮಾರು 9 ವರ್ಷ ಗತಿಸಿವೆ. ಆದರೆ, ಗ್ರಾ.ಪಂ.ನಿಂದ ಪ.ಪಂ.ಗೆ ಮೇಲ್ದಜೆಗೇರುವ ಸಮಯದಲ್ಲಿ ಹೊರಡಿಸಿದ ರಾಜ್ಯಪತ್ರದಲ್ಲಿ ನಮೂದಿಸಿದ ಸರ್ವೇ ನಂಬರಗಳ ಪೈಕಿ ಸಧ್ಯ ನಿರ್ಮಿಸಲಾಗಿರುವ ಡೈಮಂಡ ಪಾರ್ಕನ ಸ.ನಂ. 244/2, 245/1, 245/2, 246/* ಗಳು ಈ ಜಮೀನವು ಸಿಟಿ ಸರ್ವೇ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ಈ ಸ.ನಂ.ಗಳನ್ನು ಭೂಪರಿವರ್ತನೆ ಮಾಡಿ, ಸುಮಾರು 40 ಎಕರೆ 38 ಗುಂಟೆ ಜಾಗೆಯಲ್ಲಿ ವಿವಿಧ ಅಳತೆಯ 759 ಪ್ಲಾಟುಗಳನ್ನು ಪೈಕಿ ಶೇ.40 ಪ್ಲಾಟುಗಳ ಉತಾರೆಯನ್ನು ಪ.ಪಂ.ಯಿಂದ ಪೂರೈಸಲಾಗಿದೆ ಎಂದು ಆರೋಪಿಸಿದ ಅವರು, ಈ ಪಾರ್ಕ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಪಾರ್ಕನ್ನು ನಿರ್ಮಾಣ ಮಾಡಿದ್ದರೂ ಕೂಡ ಪ.ಪಂ.ನವರು ಇದನ್ನೆಲ್ಲ ಗಮನಿಸದೆ ಹೇಗೆ ಉತಾರೆಗಳನ್ನು ಪೂರೈಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಭೂಪರಿವರ್ತನೆ ಸಮಯದಲ್ಲಿ ಪಾಲಿಸಬೇಕಾದ ಕಾನೂನುಗಳೆಲ್ಲವೂ ಎಲ್ಲಿಗೆ ಹೋದವು? ಅಧಿಕಾರಿಗಳಾದರೂ ಇದನ್ನೆಲ್ಲ ಗಮನಿಸದೇ ಈ ಜಮೀನುಗಳನ್ನು ಹೇಗೆ ಭೂಪರಿವರ್ತನೆ ಮಾಡಿ, ಪ.ಪಂ. ವ್ಯಾಪ್ತಿಯಲ್ಲಿ ಸೇರಿಸಿದ್ದಾರೆ 759 ಪ್ಲಾಟುಗಳ ಪೈಕಿ ಶೇ.40 ಉತಾರೆಗಳನ್ನು ಪೂರೈಸಿದ್ದಾರೆ ಎಂಬುದನ್ನು ಅಧಿಕಾರಿಗಳೇ ಹೇಳಬೇಕು. ಡೈಮಂಡ ಪಾರ್ಕನಲ್ಲಿ ಸಾರ್ವಜನಿಕರು ತಮ್ಮ ಉಳಿತಾಯ ಹಣವನ್ನು ನೀಡಿ ಅಥವಾ ಸಾಲ, ಸೂಲ ಮಾಡಿ ಪ್ಲಾಟುಗಳನ್ನು ಖರೀದಿ ಮಾಡುತ್ತಾರೆ ಅಂತಹ ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ತಪ್ಪಿಸುವ ಉದ್ದೇಶದಿಂದ ಇನ್ನಾದರೂ ಜಿಲ್ಲಾಧಿಕಾರಿಗಳು ಮಧ್ಯಸ್ತಿಕೆ ವಹಿಸಿ, ಇದನ್ನೆಲ್ಲ ಕೂಲಂಕುಶವಾಗಿ ಪರಿಶೀಲಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

