ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷದಂತೆ ಸೆ.೩೦ರಿಂದ ಅಕ್ಟೋಬರ್ ೦೪ರವರೆಗೆ ರಾಜ್ಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಭೇಟಿ ನೀಡಲು ಸÀಮಾಜ ಕಲ್ಯಾಣ ಇಲಾಖೆ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದಿಂದ ನಾಗಪುರಕ್ಕೆ ಭೇಟಿ ನೀಡಲಿರುವ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ https://swd.karnataka.gov.inವೆಬ್‌ಸೈಟ್ ಮೂಲಕ ಸೆ.೯ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ವಿಜಯಪುರ ಜಿಲ್ಲೆಯ ಅನುಯಾಯಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮನವಿ ಮಾಡಿಕೊಂಡಿದ್ದಾರೆ.