ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ೨೦೨೫-೨೬ನೇ ಸಾಲಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸಾಲ ಸೌಲಭ್ಯ ಪಡೆಯಲಿಚ್ಛಿಸುವ ಕೈಮಗ್ಗ ನೇಕಾರರು ಅರ್ಜಿಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ವಿಜಯಪುರ ಕಚೇರಿಯಿಂದ ಪಡೆದು ಭರ್ತಿ ಮಾಡಿ, ಕೇಂದ್ರ ಸರ್ಕಾರ ನೀಡಿರುವ ನೇಕಾರರ ಪೆಹಚಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಆಧಾರ ನಂಬರ್ ಸೀಡ್ ಇರುವ ಬ್ಯಾಂಕ್ ಪಾಸ್ ಬುಕ್, ಭಾವಚಿತ್ರವಿರುವ ಅಗತ್ಯ ದಾಖಲೆಗಳನ್ನು ದಿನಾಂಕ : ೩೦-೦೯-೨೦೨೫ರೊಳಗಾಗಿ ಸಲ್ಲಿಸಬೇಕು.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಶಿಕಾರಖಾನಾ, ಸ್ಟೇಶನ್ ಬ್ಯಾಕ್‌ರೋಡ, ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.