ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಐತಿಹಾಸಿಕ ಸ್ಮಾರಕಗಳ ಶಿಲಾ ಶಾಸನಗಳು ನಮ್ಮ ಸಂಸ್ಕೃತಿ ಬಿಂಬಿಸುವ ಕುರುಹುಗಳು ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಇತಿಹಾಸ ಅಕಾಡೆಮಿ ಸದಸ್ಯ ನಿಂಗನಗೌಡ ದೇಸಾಯಿ ಹೇಳಿದರು.
ಪಟ್ಟಣದ ಹಿಲ್ ಟಾಪ್ನಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ಅರಿಯಬೇಕು, ಪ್ರತಿಯೊಬ್ಬರ ತಮ್ಮ ತಮ್ಮ ಊರು, ಗ್ರಾಮದಲ್ಲಿರುವ ಪ್ರಾಚೀನ ದೇವಾಲಯಗಳು, ಕೋಟಿ ಕೊತ್ತಲಗಳು, ಗುಮ್ಮಟಗಳು, ಅರಮನೆಗಳು, ಶಿಲಾಶಾಸನಗಳು ಹಿನ್ನೆಲೆ ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುವ ಮೂಲಕ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆ ಅಧ್ಯಕ್ಷ ವಿಶ್ವನಾಥರಡ್ಡಿ ಅಬ್ಬೆತುಮಕೂರು ಪ್ರಾಸ್ತಾವಿಕ ಮಾತನಾಡಿದರು, ಉಪನ್ಯಾಸಕರಾದ ಸುರೇಶ ಪರಸನಹಳ್ಳಿ, ರೇವಣಸಿದ್ದಪ್ಪ ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುನಿತಾ ಹಣಜಿ ನಿರೂಪಿಸಿದರು. ಬಾಪುಗೌಡ ಸ್ವಾಗತಿಸಿದರು, ರುದ್ರಗೌಡ ವಂದಿಸಿದರು.