ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಾದ್ಯಂತ ಬುಧವಾರ ಗಣಪತಿಯ ಹಬ್ಬವನ್ನು ಭಕ್ತಿಯಿಂದ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಎಲ್ಲರ ಮನೆಮನೆಗಳಲ್ಲಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಗಣಪತಿಯ ಆರಾಧನೆ ಶ್ರೆದ್ಧೆ, ಭಕ್ತಿಯಿಂದ ನಡೆಯಿತು. ಗಣೇಶನ ಮೂರ್ತಿ ನೋಡಿ ಫುಲ್ ಖುಷಿಯಲ್ಲಿ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸಿದ್ದರು.
ಚಡಚಣ ತಾಲೂಕಿನಾದ್ಯಂತ ಯಾವುದಕ್ಕೂ ಏನು ಕಡಿಮೆ ಇಲ್ಲದಂತೆ ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.
ಇಂದೇ ಹಬ್ಬವಾಗಿದ್ದರಿಂದ ಬಹುತೇಕ ಕಡೆ ಹೆಚ್ಚು ಗಣಪತಿ ಮೂರ್ತಿಗಳನ್ನ ಯುವಕರು ಪ್ರತಿಷ್ಠಾಪನೆ ಮಾಡಿದ್ದರು .