ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸ್ನಾತಕೋತ್ತರ ವಿಭಾಗಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗಾಗಿ ಯುಯುಸಿಎಂಎಸ್ ತಂತ್ರಾಂಶದ ಮೂಲಕ ದಿನಾಂಕ: ೨೪-೦೮-೨೦೨೫ ರಿಂದ ೨೯-೦೮-೨೦೨೫ ರವರೆಗೆ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ಯುಯುಸಿಎಂಎಸ್ ತಂತ್ರಾAಶದ ಮೂಲಕ ನಿಗದಿಪಡಿಸಲಾದ ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು.ದಿನಾಂಕ:೩೦-೦೮-೨೦೨೫ರಂದು ಬಾಕಿ ಉಳಿದಿರುವ ಸೀಟುಗಳನ್ನು ಯುಯುಸಿಎಂಎಸ್ ತಂತ್ರಾAಶದ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಸೀಟು ಹಂಚಿಕೆ ಮಾಡಿ ಪ್ರವೇಶಾತಿಯನ್ನು ನೀಡಲಾಗುವುದು.
ಸ್ನಾತಕೋತ್ತರ ಕೇಂದ್ರ ವಿಜಯಪುರದಲ್ಲಿ ಲಭ್ಯವಿರುವ ಎಲ್ಲ ಸ್ನಾತಕೋತ್ತರ ಕೋರ್ಸಗಳ ಪ್ರವೇಶ ಶುಲ್ಕಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೇಕಡಾ ೩೦% ಕಡಿಮೆ ಮಾಡಲಾಗಿರುತ್ತದೆ ಹಾಗೂ ಸದರಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ದಿನಾಂಕ:೩೦-೦೮-೨೦೨೫ ರಂದು ಬೆಳಿಗ್ಗೆ ೯.೦೦ ಗಂಟೆಗೆ ಹಾಜರಾಗಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ತಿತಿತಿ.ಡಿಛಿub.ಚಿಛಿ.iಟಿ ಜಾಲತಾಣವನ್ನು ವೀಕ್ಷಿಸುವಂತೆ ವಿಶ್ವವಿದ್ಯಾಲಯದ ಉಪ ಕುಲಸಚಿವರ ಪ್ರಕಟಣೆ ತಿಳಿಸಿದೆ.