ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಉರ್ದುಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ರುಕ್ಕಯ್ಯಾ ಶಿರವಾಳ ಮತ್ತು ಫೌಜಿಯಾ ನಸರುದ್ದಿನ್ ಇವರು ದಿ:೨೪ರಂದು ಆಲಮೇಲದಲ್ಲಿ ಮಹಮ್ಮದಿಯಾ ನಾಥ್ ಕಮೀಟಿ ವಿಜಯಪುರರವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಇಸ್ಲಾಮಿಕ್ ಕ್ವಿಜ್ (ರಸಪ್ರಶ್ನೆ) ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದು ನಗದು ಬಹುಮಾನ ೮೬೦೦ ರೂ.ಗಳು ಹಾಗೂ ಪದಕ ಮತ್ತು ಪ್ರಶಸ್ತಿಪತ್ರ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.