ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಸಂತರು, ಶರಣರು, ಪ್ರವಾದಿಗಳು ನಡೆದಾಡಿದಂತಹ ನೆಲ ನಮ್ಮದು. ಸೌಹಾರ್ದತೆಗೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿ ಹಬ್ಬಗಳನ್ನು ಆಚರಿಸಬೇಕು ಎಂದು ಸಿಂದಗಿ ಪಿಎಸ್‌ಐ ಆರೀಫ್ ಮುಷಾಪುರಿ ಸೂಚಿಸಿದರು.
ತಾಲೂಕಿನ ಮೋರಟಗಿ ಗ್ರಾಮದ ಹೊರಪೊಲೀಸ್ ಠಾಣೆಯಲ್ಲಿ ಗೌರಿ-ಗಣೇಶ ಹಾಗೂ ಈದ್-ಮಿಲಾದ್ ಪ್ರಯುಕ್ತ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪರವಾನಿಗೆ ಕಡ್ಡಾಯ: ಸರಕಾರದ ಆದೇಶವನ್ನು ಚಾಚು ತಪ್ಪದೇ ಪಾಲಿಸುವುದು ನಮ್ಮೆಲ್ಲರ ಆದ್ಯಕರ್ತವ್ಯ. ಡಿಜೆಗೆ ಸಂಬಂಧಪಟ್ಟಂತೆ ಸರಕಾರ ಅಧಿಕೃತವಾಗಿ ಇನ್ನು ಪರವಾನಿಗೆ ನೀಡಿಲ್ಲ. ಮುಂಚಿತವಾಗಿ ಸೋಲಾಪುರ್ ಇಂಡಿಯಂತಹ ಪಟ್ಟಣಕ್ಕೆ ಹೋಗಿ ಅಡ್ವಾನ್ಸ್ ದುಡ್ಡು ಕೊಟ್ಟು ಬುಕ್ ಮಾಡುವ ಕೆಲಸ ಮಾಡಬೇಡಿ. ಸರಕಾರ ಆದೇಶ ನೀಡಿದರೆ ಪರವಾನಿಗೆ ನೀಡುತ್ತೇವೆ. ಅದರ ಜೊತೆಗೆ ಕೆಇಬಿ, ಮೈಕ್ ಸೌಂಡ್, ಪಿಡಬ್ಲ್ಯೂಡಿಗೆ ಸಂಬಂದಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಪರವಾನಿಗೆ ಇಲ್ಲದೇ ಹೋದಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಕಮೀಟಿಯವರು ಜವಾಬ್ದಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಶಾಂತಿ ಸಭೆಯಲ್ಲಿ ಮಾಜಿ ಜಿಪಂ ಸದಸ್ಯ ಎನ್.ಆರ್.ತಿವಾರಿ, ರವಿಕಾಂತ ನಡುವಿನಕೇರಿ, ಶಿವಾನಂದ ಕೆರಿಗೊಂಡ ಸೇರಿದಂತೆ ಬಗಲೂರ, ಕುಳೇಕುಮಟಗಿ, ಶಿರಸಗಿ, ಹಂಚಿನಾಳ, ಹಾವಳಗಿ ಗ್ರಾಮದ ಹಿರಿಯರು, ಗಜಾನನ ಮಂಡಳಿ ಅಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.