ಮಿನಿ ವಿಧಾನಸೌಧದ ಎರಡನೆ ಹಂತದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ ಬದಲಾವಣೆಯಾದ ಹಿನ್ನೆಯಲ್ಲಿ ಈ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ನೆನೆಗುದಿಗೆ ಬಿದ್ದ ಈ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಎರಡನೆ ಹಂತದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರೂ.೫ಕೋಟಿ ಹಾಗೂ ಕಂಪೌಂಡ ನಿರ್ಮಾಣಕ್ಕೆ ಪೌರಾಡಳಿತ ಇಲಾಖೆ ವತಿಯಿಂದ ಮಂಜೂರಾದ ರೂ.೧ಕೋಟಿ ಮೊತ್ತದ ಕಾಮಗಾರಿಗೆ ಭೂಮಿ ಪೂಜೆಯಲ್ಲಿ ನೆರವೇರಿಸಿ ಮಾತನಾಡಿದ ಅವರು, ಕಂದಾಯ ಮತ್ತು ಪೌರಾಡಳಿತ ಸಚಿವರು ಸೇರಿ ರೂ.೬ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಬಹುದಿನಗಳಿಂದ ಕುಂಟುತ್ತಾ ನಡೆಯುತ್ತಿದ್ದು ಈ ಕಾಮಗಾರಿಗೆ ಮತ್ತಷ್ಟು ಅನುದಾನ ನೀಡಿ ಬೇಗೆನೆ ಪೂರ್ಣಗೊಳ್ಳಲಿ ಎಂಬುದು ನಮ್ಮ ಇಚ್ಚೆಯಾಗಿದೆ. ಜನೆವರಿ ಅಥವಾ ಡಿಸೆಂಬರ್ ತಿಂಗಳೊಳಗಾಗಿ ಸಿಎಂ ಅವರು ಸಿಂದಗಿ ನಗರಕ್ಕೆ ಆಗಮಿಸುವವರಿದ್ದಾರೆ. ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ಸಿಂದಗಿ ನಗರವನ್ನು ವಿಜಯಪುರ ಜಿಲ್ಲೆಯಲ್ಲಿಯೇ ಸುಂದರ ನಗರವಾಗಿಸುವ ಇಚ್ಚಾಶಕ್ತಿ ನನ್ನಲಿದೆ. ನಗರದ ಅಭಿವೃದ್ಧಿ ಎಲ್ಲರೂ ಕಂಕಣ ಬದ್ಧರಾಗಿ ಪ್ರಾಮಾಣಿಕ ಪ್ರಯತ್ನ ಪಡೋಣ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಗುತ್ತಿಗೆದಾರರು ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಏಕೆಂದರೆ ಹಳೆಯ ತಹಶೀಲ್ದಾರ್ ಕಛೇರಿಗೆ ಈಗಿರುವ ಪುರಸಭೆಯನ್ನು ಸ್ಥಳಾಂತರಿಸಬೇಕು ಎಂದು ಠರಾವಿನಲ್ಲಿ ಪಾಸಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಣಮಂತ ಸುಣಗಾರ, ಬಾಷಾಸಾಬ ತಾಂಬೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಬಿ.ಜಿ.ನೆಲ್ಲಗಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಿದ್ದು ಮಲ್ಲೇದ, ಶರಣಪ್ಪ ಸುಲ್ಪಿ, ರಜತ ತಾಂಬೆ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಮೋಹಸಿನ್ ಬೀಳಗಿ, ಸಾಯಬಣ್ಣ ಪುರದಾಳ, ಅಜರ್ ನಾಟೀಕಾರ ಸೇರಿದಂತೆ ಅನೇಕರಿದ್ದರು.