ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮುಂಬರುವ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಅವರ ನೇತೃತ್ವದಲ್ಲಿ ಪೋಲೀಸ್ ರೂಟ್ ಮಾರ್ಚ್ ನಡೆಸಿದರು.
ನಗರದ ದೇಸಾಯಿ ಸರ್ಕಲ್, ಅಶೋಕ್ ಸರ್ಕಲ್, ಕೋರ್ಟ್ ರೋಡ್, ಹನುಮಾನ ಚೌಕ್, ಪೋಸ್ಟ್ ಚೌಕ್ ಮಾರ್ಗವಾಗಿ ನಗರ ಪೋಲೀಸ್ ಠಾಣೆಯಲ್ಲಿ ಮುಕ್ತಾಯಗೊಂಡಿತು.
ಪೋಲೀಸ್ ರೂಟ್ ಮಾರ್ಚ್ ನಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ನಗರ ಠಾಣೆ ಪಿಎಸ್‌ಐ ಅನೀಲ ಕುಂಬಾರ, ಗ್ರಾಮೀಣ ಠಾಣೆ ಪಿಎಸ್‌ಐ ಜಿ.ಎಂ.ಪೂಜೇರಿ, ಸಾವಳಗಿ ಪಿಎಸ್‌ಐ ಅಪ್ಪಣ್ಣ ಐಗಳಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.