ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆ.ಎಸ್.ಆರ್.ಟಿ.ಸಿ, ದಾನೇಶ್ವರಿ ಹಾಗೂ ಮಹಾತ್ಮ ಗಾಂಧಿ ಕಾಲೊನಿಯ ವರದ ಹನುಮಾನ್ ಗಜಾನನ ತರುಣ ಮಂಡಳಿ ವತಿಯಿಂದ ನಾಳೆ ಆ.26 ರ ಮಂಗಳವಾರದಂದು ನಗರದಲ್ಲಿ ವಿಜಯಪುರ ಚಾ ಲಂಬೋದರನ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ರವರು, ಸಂಜೆ 4 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಮೆರವಣಿಗೆ ಚಾಲನೆ ನೀಡಲಿದ್ದು, ನೇತಾಜಿ ಸುಭಾಸಚಂದ್ರ ಭೋಸ್ ರಸ್ತೆ ಮೂಲಕ ಶ್ರೀ ವರದ ಹನುಮಾನ್ ದೇವಸ್ಥಾನ ವರೆಗೆ ಸಾಗಲಿದೆ.
ಕಾರಣ ಮುಖಂಡರು, ಹಿತೈಷಿಗಳು, ಹಿಂದೂ ಕಾರ್ಯಕರ್ತರು, ಅಭಿಮಾನಿಗಳು, ಗಣೇಶನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭೆ ತರಲು ಮಂಡಳಿಯ ಸದಸ್ಯರು ಶ್ರೀ ಸಂತೋಷ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.