ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣ ಮಾಸದ ಆರನೆಯ ದಿನದ ಅನುಭಾವ ಮಾಲಿಕೆಯಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೇಕರ ಮಂಜಪ್ಪ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ತಮ್ಮ ಅನುಭಾವವನ್ನು ನೀಡಿದರು.
ಹರ್ಡೇಕರ ಮಂಜಪ್ಪನವರು ಶಿಕ್ಷಕರು, ನಿರಂಜನ ಶರಣರು, ಜನಸೇವಕರು, ಧೀಮಂತ ಪತ್ರಕರ್ತ, ರಾಷ್ಟ್ರಪ್ರೇಮದ ಮಂದಾರ ಎಂದು ಮನದುಂಬಿ ಹೇಳುತ್ತಾ, ಬನವಾಸಿ ಮೂಲದವರಾದ ಅವರ ತಂದೆ ಸಖಾರಾಮ ಅಭ್ಯoಕರ ಮತ್ತು ತಾಯಿ ಮಂಜಮ್ಮ ಹರ್ಡೇಕರ ಅವರ ಬಗೆಗೆ ಹೊಸ ಬೆಳಕನ್ನು ಚೆಲ್ಲಿದರು. ಅವರ ಬಾಲ್ಯದ ಶಿಕ್ಷಣ ಮತ್ತು ಅವರಲ್ಲಿ ಸ್ವಾತಂತ್ರದ ಅಭಿರುಚಿ ಹುಟ್ಟಿ, ಅದು ಅವರ ಜೀವನದಲ್ಲಿ ಹೇಗೆ ಒಂದು ಅಗಾಧವಾದ ತಿರುವು ಪಡೆಯಿತು ಎನ್ನುವುದನ್ನು ಅಭಿಮಾನದಿಂದ ತಿಳಿಸಿದರು

ಭಾರತ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ,ಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಹುರಿದುಂಬಿಸುವ ಕೆಲಸವನ್ನು ಮಂಜಪ್ಪನವರು ಸ್ವಾತಂತ್ರ ಚಳುವಳಿಯಲ್ಲಿ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುವದರ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡ ರಾಷ್ಟ್ರಪ್ರೇಮಿ ಮತ್ತು ಸಮಾಜಪ್ರೇಮಿ,
ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯಲ್ಲಿ ಬರುವ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದರು.ನಂತರ ದಾವಣಗೆರೆಗೆ ಬಂದು ಮಾಗಾನಹಳ್ಳಿ ದೊಡ್ಡಬಸಪ್ಪನವರ ಸಹಾಯ ಪಡೆದು ಧನುರ್ವಾರಿ ಪತ್ರಿಕೆ ಪ್ರಾರಂಭ ಮಾಡಿದ್ದು,ಒಂದು ಸಲ ಮುಂಬೈಗೆ ಹೋದಾಗ ಆರ್ಯ ಸಮಾಜದ ಚಟುವಟಿಕೆಗಳನ್ನು ನೋಡಿ ಪ್ರಭಾವಿತರಾಗಿ, ನಮ್ಮಲ್ಲಿಯೂ ಇಂಥ ಕೆಲಸವಾಗಬೇಕು ಎಂದು ಪ್ರೇರೆಪಿತರಾದರು.
ಗಾಂಧೀಜಿಯ ಜೊತೆಗಿನ ಅವರ ಒಡನಾಟ, ಸಾಬರಮತಿಯ ಭೆಟ್ಟಿ,ಹರಿಹರದ ಹತ್ತಿರ ಆಶ್ರಮ ಸ್ಥಾಪಿಸಿ ಸತ್ಯಾಗ್ರಹ ಸಿದ್ಧಾಂತ ಪ್ರಸಾರ ಮಾಡಿದ್ದು, ಅಥಣಿ ಮಠದಲ್ಲಿ ಮತ್ತು ಬಂಥನಾಳ ಶಿವ ಯೋಗಿಗಳಿಂದ ಲಿಂಗದೀಕ್ಷೆಪಡೆದದ್ದು, ಕಂಚಿಕೆರೆ ಮಹಾಲಿಂಗಪ್ಪನವರಿಂದ ಬಸವಣ್ಣನವರ ಕುರಿತು ಅಭಿಮಾನ ಬೆಳೆದದ್ದು, ದಾವಣಗೆರೆಯ ಮೃತ್ಯುಂಜಯ ಸ್ವಾಮಿಗಳ ಮಠದಲ್ಲಿ ಭಜನಾ ಮಂಡಳಿ ಸ್ಥಾಪಿಸಿ,ಶರಣ ಮಾಸ ಮಾಲಿಕೆ ಪ್ರಾರಂಭ ಮಾಡಿದ್ದು, ಕರಿಬಸವೇಂದ್ರ ಶಾಸ್ತ್ರಿಗಳಿಗೆ ಪತ್ರ ಬರೆದು ಬಸವಜಯಂತಿ ಯಾವಾಗ ಆಚರಣೆಮಾಡಬೇಕು ಎಂದು ತಿಳಿದುಕೊಂಡು 1913 ರಲ್ಲಿ ಮೊಟ್ಟಮೊದಲ ಬಾರಿಗೆ ಬಸವಜಯಂತಿ ಮಾಡಿದ್ದು ಐತಿಹಾಸಿಕ ದಾಖಲೆ ಎಂದು ತಿಳಿಸಿದರು.
ಹರ್ಡೇಕರ ಮಂಜಪ್ಪನವರು ಹಲವಾರು ಸಂಘ -ಸಂಸ್ಥೆಗಳನ್ನು ಕಟ್ಟಿದ್ದು ಹಲವಾರು ಪುಸ್ತಕಗಳನ್ನು ರಚಿಸಿದ್ದು ಹಂಚಿಕೊಂಡರು. ಕಡೆಯಲ್ಲಿ ಅವರು ಹೇಳಿದ ಜೀವನ ಸಂದೇಶದ ಜೊತೆಗೆ ತಮ್ಮ ಮಾತುಗಳನ್ನು ಮುಕ್ತಾಯ ಮಾಡಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಹರ್ಡೇಕರ ಮಂಜಪ್ಪನವರ ಸಮಗ್ರ ಜೀವನದ ಹೊಳಹುಗಳನ್ನು ಇನ್ನೊಮ್ಮೆ ಮೆಲುಕು ಹಾಕಿದರು.
ಡಾ. ತಾರಾ. ಬಿ. ಎನ್ ಅವರ ಪ್ರಾರ್ಥನೆ, ಶರಣ ಅರ್. ಎಸ್. ಬಿರಾದಾರ ಅವರ ಸ್ವಾಗತ,ಡಾ. ಬಸಮ್ಮ ಗಂಗನಳ್ಳಿ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳ, ಶರಣೆ ಜಯಶ್ರೀ ಆಲೂರ ಅವರ ಕಾರ್ಯಕ್ರಮ ನಿರ್ವಹಣೆ ಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು

ಶಾರದಾ ಪಾಟೀಲ್ (ಮೇಟಿ) ವಿಶೇಷ ದತ್ತಿ ಉಪನ್ಯಾಸ
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 306
