Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬದುಕಿನ ಬೆಳದಿಂಗಳು
ವಿಶೇಷ ಲೇಖನ

ಬದುಕಿನ ಬೆಳದಿಂಗಳು

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ದುಂಡೇಶ್ ಕೆ.ಬಿ
ಹವ್ಯಾಸಿ ಬರಹಗಾರರು
ವಿಜಯಪುರ ಜಿಲ್ಲೆ
ಮೋ. 9964502514

ಉದಯರಶ್ಮಿ ದಿನಪತ್ರಿಕೆ

 ಬದುಕಿನ ಬೆಳದಿಂಗಳಲ್ಲಿ ನಮ್ಮ ಹುರುಪು, ಹುಕುಂಗಳು ಹಾಗೂ ಹಲವು ವಿಭಿನ್ನತೆಗಳ ವಿಚಾರಾರ್ಥಗಳು ನೆನೆಗುದಿಗೆ ಬಿದ್ದಿದ್ದುಂಟು. ಹಾಗೆಯೇ ಸದ್ಗುಣ-ದುರ್ಗುಣಗಳ ವ್ಯತ್ಯಾಸವನು ಅರಿತು ನಡೆಯಬೇಕಾದ ಬುದ್ದಿ ಜೀವಿ (ಮನುಷ್ಯ) ದೈಹಿಕ, ಮಾನಸಿಕತೆಯನ್ನು ಚೊಟ್ಟಾಗಿಸಿಕೊಂಡಿದ್ದಾನೆ. ಇವೆಲ್ಲ ಮನದಲ್ಲಿಟ್ಟುಕೊಂಡು ಬದುಕನ್ನು ಹಸನಾಗಿಸಿಕೊಳ್ಳುವ ಕಾರ್ಯ ಮಾನವನ ಅನುಸರಣೆ. ನಮ್ಮ ಸ್ವಾವಲಂಬನೆಯ ಬದುಕಿನ ಕೋಲ್ಮಿಂಚು ಸದಾ ನಮಗೆ ಬೆಳಕಾಗಿರಬೇಕು. ಆದರೆ ಅರಳಬೇಕಾದ ಹೂವುಗಳು ಇವತ್ತು ನಲುಗಿ ಗಾಳಿಗೆ ಸಿಕ್ಕ ಗಿಡದ ತಪ್ಪಲಿ (ಎಲೆ) ನಂತೆ ಹಾರಾಡುತಿವೆ. ಚಿಗುರಾಗಿ ಜನ್ಮ ತಾಳಿ ದೊಡ್ಡವರಾದ ನಾವುಗಳು ಇಂದು ತಾಜಾವಿಲ್ಲದ ಹಣ್ಣಾಗಿಬಿಟ್ಟಿಲ್ಲವೇ? ಒಬ್ಬ ದಾರಿ ಹೋಕ ತನ್ನ ದಾರಿ ಅರಿಯದಿದ್ದರೂ ಎಲ್ಲರ ಸಹಾಯ ಕೋರಿ ಮುಂದೆ ಸಾಗುತ್ತಾನೆ. ಕಾರಣ ದಡ ಸೇರುವ ತವಕದ ಸ್ಪಷ್ಟ ನಿಲುವು ಅವನಲ್ಲಿರುತ್ತದೆ. ಚಿಕ್ಕವರಿದ್ದಾಗ ಚಂದಿರನೇತಕೆ ಓಡುವನಮ್ಮ? ಎಂದು ಕೇಳಿದ್ದುಂಟು ಆದರೀಗ ಚಂದ್ರನ ಮೇಲೆ ಹೋಗಿ ಬರುವ ದಕ್ಷತೆ ನಮ್ಮಲ್ಲಿದ್ದರು ಆತ್ಮಸ್ಥೈರ್ಯ ಕುಂಠಿತವಾದಂತೆ ಭಾಸವಾಗುತ್ತಿದೆ. ಬೆಳದಿಂಗಳು ಎಂಬುದು ಬದುಕಿನ ಸಂತೋಷ, ನೆಮ್ಮದಿ, ಸೌಂದರ್ಯ ಮತ್ತು ಭರವಸೆಯನ್ನು ಸೂಚಿಸುತ್ತದೆ. ಬದುಕಿನ ಹಲವು ಆಯಾಮಗಳ ನಡುವೆಯೂ ಸಿಗುವ ಸಕಾರಾತ್ಮಕ ಅಂಶಗಳನ್ನು ಹಾಗೂ ಸುಂದರ ಕ್ಷಣಗಳನ್ನು ತೋರಿಸುತ್ತದೆ. ಬೆಳದಿಂಗಳು ಎಂದರೆ ಸಾಮಾನ್ಯವಾಗಿ ಚಂದ್ರನ ಬೆಳಕು ಅಥವಾ ರಾತ್ರಿಯಲ್ಲಿ ಚಂದ್ರನ ಬೆಳಕಿನಿಂದ ಉಂಟಾಗುವ ಪ್ರಕಾಶಮಾನವಾದ ನೋಟ. ಬೆಳದಿಂಗಳು ಶಾಂತಿ, ನೆಮ್ಮದಿ ಮತ್ತು ಸೌಂದರ್ಯದ ಸಂಕೇತವಾಗಿದೆ. ಹೀಗಾಗಿ 'ಬದುಕಿನ ಬೆಳದಿಂಗಳು' ಎಂಬುದು ಬದುಕಿನ ಸಕಾರಾತ್ಮಕ, ಸಂತೋಷದಾಯಕ ಮತ್ತು ಪ್ರಕಾಶಮಾನವಾದ ಭಾಗಗಳನ್ನು ತಿಳಿಸುತ್ತದೆ. ಇದು ಪ್ರತಿ ಕ್ಷಣದ ನಡುವೆಯೂ ಕಾಣಸಿಗುವ ಸೌಂದರ್ಯ, ಪ್ರೀತಿ ಮತ್ತು ಆಶಾವಾದವನ್ನು ತೋರಿಸುತ್ತದೆ. ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಂಡು, ಕಷ್ಟಗಳನ್ನು ಎದುರಿಸುವುದು ಕಲಿತು, ಧೈರ್ಯವನ್ನು ಹೊತ್ತು ಭರವಸೆ ಎಂಬ ಶಕ್ತಿಯನ್ನು ತುಂಬಿಕೊಂಡು ಮುನ್ನಡೆದಾಗ ಬದುಕಿನ ಬೆಳಕು ನಮಗೆ ಗಾಢವಾಗಿ ಗೋಚರಿಸುತ್ತದೆ.

ಒಂದಷ್ಟು ಅಂಶಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕು ಕಾರಣ ಬದುಕಲು ಒಂದು ಮಾರ್ಗದ ಅವಶ್ಯವಿದೆ. ಹೀಗೆ ಬದುಕಬೇಕು ಎಂದಾಗ ಬದುಕು ಮಾದರಿಯಾಗುತ್ತದೆ. ಬದುಕನ್ನು ಎಲ್ಲರೂ ಬದುಕುತ್ತಾರೆ. ಅದು ಕ್ರಮಬದ್ದವಾಗಿ ಇರಬೇಕು ಅಂದಾಗ ಅದು ಸಫಲತೆಯ ಬದುಕಾಗಿ ನಿರ್ಮಾಣವಾಗುತ್ತದೆ. ಒಂದಷ್ಟು ಅಂಶಗಳನ್ನು ಮೆಲಕು ಹಾಕೋಣ.


1) ಬದುಕು ಅನಿವಾರ್ಯ
ಯಾವ ಸನಿಹವಾದ ವ್ಯಕ್ತಿಯೂ ನಮ್ಮ ಅನಿವಾರ್ಯಕ್ಕೆ ಇರುವರೋ, ಅವಶ್ಯಕತೆಗೆ ತಕ್ಕಂತೆ ಬದಲಾಗುವರೋ ಅದನ್ನು ಕಂಡಾಗ ನಾವು ಕಂಡುಕೊಳ್ಳುವುದು ಒಂದೇ ನಮ್ಮ ಸಂದರ್ಭಕ್ಕೆ ನಾವೇ ರೂವಾರಿ. ಅಣುಕಿಸುವರ ಮಧ್ಯೆ ಇದ್ದು ಸೆಟದು ಸಂಭ್ರಮಿಸಬೇಕು. ಈ ಅನಿವಾರ್ಯದಲ್ಲಿ ಕಲಿಕೆ, ಸಂಬಂಧ, ಜವಾಬ್ದಾರಿ ಇವುಗಳಲ್ಲಿ ಎಲ್ಲರೂ ಅನಿವಾರ್ಯವಾಗಿ ಬೇಕೇ ಬೇಕು. ಅನೇಕ ಅನುಭವಗಳನ್ನು ಎದುರಿಸಿ, ಕಲಿತು ಮುಂದುವರೆದು ಜೀವನ ನಡೆಸುವುದು, ಹಾಗೆ ಒಂದು ಕಡೆ ಹುಟ್ಟು ಇನ್ನೊಂದು ಕಡೆ ಕೊನೆ ಎಂದು ಪ್ರತಿ ಕ್ಷಣ ಉಸಿರಾಡುತ ಬದುಕು ಸವೆಸುವ ನಾವು ಅನಿವಾರ್ಯದ ಕೊರತೆಯಿಂದ ಕ್ಷಣ ಕ್ಷಣದ ಆನಂದವನ್ನು ಮರೆಯುತ್ತೇವೆ. ಹುಟ್ಟು-ಸಾವುಗಳ ನಡುವಿನ ನಿರಂತರ ಕಾಲವೇ ಬದುಕು. ಅದು ತಪ್ಪದ ಅನಿವಾರ್ಯ ಸತ್ಯ.
2) ಸರಳತೆ
ಬದುಕನ್ನು ಸಾರ್ಥಕಗೊಳಿಸಲು ಸರಳತೆ ತುಂಬಾ ಅವಶ್ಯ. ನಾವು ಅರಿತಿರುವ ಅನುಭವದ ಸಾರದಲ್ಲಿ ಸರಳತೆ ಏಕೆ? ಎಂದರೆ ಕಾರಣವಿಷ್ಟೆ ಆಸೆಗಳು, ಅಮಲು, ಆಡಂಬರ, ಅಜ್ಞಾನ ಮುಖ್ಯವಾಗಿ ಅಂತರಂಗದ ವೇದನೆಗಳು ದಿನಕಳೆದಂತೆ ಧುಮುಕುವ ಪಾತಾಳದಂತೆ, ಇವೆಲ್ಲ ಸರಿಯಾದ ನಿಟ್ಟಿನಲ್ಲಿ ಮನವರಿಕೆ ಉಂಟಾದಾಗ ಜೀವನ ಸರಳೀಕರಣವಾಗುತ್ತೆ. ಆಗ ಎಲ್ಲವೂ ಸಮಾಧಾನಕರವಾಗಿ ಬಿಂಬಿಸುತ್ತೆ. ಹೆಚ್ಚು ಮನುಷ್ಯ (ಬುದ್ದಿ) ಮನುಷ್ಯರಾಗಲು ಇಚ್ಛಿಸಿದಾಗ ಅಲ್ಲಿಗೆ ಸರಳತೆಯು ಸಾಕಾರಗೊಳ್ಳುತ್ತದೆ.
3) ಆಂತರಿಕ ಅರಿವು
ಎಂದರೆ ಒಬ್ಬರ ಅಂತರಿಕ ಸ್ಥಿತಿಗಳಾದ ಭಾವನೆಗಳು, ಆಸೆಗಳು, ಮತ್ತು ಆಲೋಚನೆಗಳ ಬಗ್ಗೆ ತಿಳಿದುಕೊಳ್ಳುವುದು. ಒಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ. ಹಾಗೂ ಭಾವನೆಗಳ ಅರಿವು, ಆಲೋಚನೆಯ ರೀತಿ, ಸಾಮರ್ಥ್ಯದ ಅರಿವು, ದೌರ್ಬಲ್ಯದ ಕೊರತೆ ಅರಿತಾಗ ಅದು ನಮ್ಮನ್ನು ನಾವು ಅರಿತುಕೊಂಡು ಬೇರೆಯವರನ್ನು ಆಂತರಿಕವಾಗಿ ಅರಿಯಲು ಸಹಾಯವಾಗುತ್ತದೆ. ಇದು ನಮ್ಮ ಇರುವಿಕೆ ಯಾವ ರೀತಿಯಾಗಿ ಇರಬೇಕೆಂದು ಅರಿಸುತ್ತದೆ. ಅಂದರೆ ವ್ಯವಹಾರ, ಸಂಬಂಧ, ಜೀವನದಲ್ಲಿನ ಏರಿಳಿತಗಳು ಎಲ್ಲದಕ್ಕಿಂತ ಮುಖ್ಯವಾಗಿ ಆಂತರಿಕ ಶಾಂತಿ ಬೆಳೆಸಲು ಪ್ರಮುಖವಾಗಿದೆ. ಮನುಷ್ಯ ಆಂತರಿಕವಾಗಿ ತನ್ನನ್ನು ತಾನು ತಿಳಿದುಕೊಳ್ಳಬೇಕು, ಸ್ವಂತ ಆತ್ಮವನ್ನು ಅರಿತು ಅದನ್ನು ಅರ್ತಿಸಬೇಕು. (ಆನಂದ ಪಡಬೇಕು.) ಅದು ಬದುಕಿನ ಆಂತರಿಕತೆಯನ್ನು ಚಿತ್ರಿಸುತ್ತದೆ.
4) ಆದರ್ಶಮಯ ಬದುಕು
ಆದರ್ಶಮಯ ಬದುಕು ಎಂದರೆ, ಪ್ರತಿಯೊರ್ವ ವ್ಯಕ್ತಿ ತನ್ನ ಬದುಕನ್ನು ಅರ್ಥಪೂರ್ಣವಾಗಿ ಸಂತೋಷದಿಂದ ಮತ್ತು ತೃಪ್ತಿಯಿಂದ ಬದುಕುವದು ಎಂಬ ಧ್ಯೇಯವಾಗಿದೆ. ಆದರ್ಶ ಬದುಕಿಗೆ ಬೇಕಾದ ಕೆಲವು ಅಂಶಗಳನ್ನು ಅಳವಡಿಸಿಕೊಂಡಾಗ ಒಳ್ಳೆಯ ಸಂಬಂಧಗಳು, ಉದ್ದೇಶ, ಬೆಳವಣಿಗೆ, ಕೃತಜ್ಞತಾ ಭಾವ, ಸಮಾಜಕ್ಕೆ ಕೊಡುಗೆ, ನೆಮ್ಮದಿ, ಇವೆಲ್ಲವೂಗಳು ಒಂದಿಷ್ಟು ಖಾತ್ರಿ ಅಂಶಗಳನ್ನು ಅಳವಡಿಸಿಕೊಂಡಾಗ ಆದರ್ಶಮಯ ಬದುಕಾದಿತು. ಒಬ್ಬ ವ್ಯಕ್ತಿ ಬೇರೆಯವರಿಗೆ ಆದರ್ಶವಾಗಿರಬೇಕೆಂಬುದು ಹಿರಿಯರ ಗೀತೋಪದೇಶ ನಿರಂತರ ಪಠಿಸಬೇಕು. ನಾವು ಯಾವ ತೆರನಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬುದು ನಾವು ಅರಿಯದಿದ್ದರೂ ಬೇರೆಯವರು ನಮ್ಮನ್ನು ಗಾಢವಾಗಿ ಪರೀಕ್ಷಿಸುತ್ತಿರುತ್ತಾರೆ. ಅದಕ್ಕಿರುವ ಮಾರ್ಗ ನಮ್ಮನ್ನು ಬೇರೆಯವರು ವಿಮರ್ಶೆ ಮಾಡುವಷ್ಟು ಇರುವಿಕೆ ಇಲ್ಲವಾದರೂ ಮೆಚ್ಚಿಕೊಳ್ಳುವ ನಡುವಳಿಕೆ, ಆದರ್ಶ ವ್ಯಕ್ತಿತ್ವ, ಸರ್ವೋತ್ತಮ ಆಚಾರ-ವಿಚಾರಗಳ ಶಿಸ್ತು ಜೀವನವೇ ಆದರ್ಶಮಯ ಬದುಕು.
5) ಜೀವನದ ಅರ್ಥ
ವ್ಯಕ್ತಿಯ ನೈಜತೆ ತನ್ನ ಆಂತರಿಕ ನಿರ್ಧಾರದಿಂದ ಬರುತ್ತದೆ. ಅನುಭವ, ಅಧ್ಯಯನ ಕ್ರಮ, ಪ್ರೀತಿಯ ಪರೋಪಕಾರ, ನೆನೆಸಿಕೊಂಡು ಸಂಬಂಧಕ್ಕೆ ಸತ್ಕರಿಸಿ ತದನಂತರ ಜೀವನದ ಅರ್ಥ ಅರಿಯಲು ಮುನ್ನಡೆಯುವ ಸಾಹಸ ಮಾಡಬೇಕು. ವ್ಯಕ್ತಿ ತನ್ನ ಸ್ವಭಾವ, ಆದರ್ಶಗುಣಗಳು, ಆಕಾಂಕ್ಷೆಗಳು, ಸ್ವಂತಸ್ಥಾನ ಮತ್ತು ಕೌಶಲಗಳು ಏನು ಎಂದು ಅತಿಯಾಗಿ ಅರಿಯಬೇಕಾಗಿದೆ. ಮುಂದುವರೆದು ಅಂತರಂಗವನು ಶುಚಿಯಾಗಿಸಿಕೊಂಡು, ನಾವು ನೆಲೆಸಿರುವ ಪರಿಸರ ಅತ್ಯಂತ ವಿಶೇಷತೆಯಿಂದ ಕೂಡಿದ್ದು, ಒಂದಷ್ಟು ಇರುವಿಕೆಯಲ್ಲಿ ಭಿನ್ನತೆ ನೋಡಬಹುದು, ಇದಕ್ಕೆ ಜೀವನದ ಪುನರ್ವಿಮರ್ಶೆ ಅಗತ್ಯತೆ ಇದೆ. ಮತ್ತು ನಾವುಗಳು ಪಡೆಯುವ ಜ್ಞಾನ ನಿರಂತರವಾಗಿರಬೇಕು, ನಂತರ ಪಡೆದ ಜ್ಞಾನ, ನೇರವಾದ ಅನುಭವಗಳು ನೀಡುತ್ತವೆ. ನಂತರ ಜೀವನದ ಅರ್ಥ ಮತ್ತು ಉದ್ದೇಶವೂ ಬಿಂಬಿಸುತ್ತೆ.
ಇದನೆಲ್ಲ ಗಮನಿಸಿ ನಾವೂ ಬದುಕನ್ನು ಒಂಚೂರು ಭಾರವಾಗಿಸದೆ ಸಂಭ್ರಮಿಸೋಣ, ನಗುನಗುತ ಬಾಳೋಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ
    In (ರಾಜ್ಯ ) ಜಿಲ್ಲೆ
  • ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ
    In (ರಾಜ್ಯ ) ಜಿಲ್ಲೆ
  • ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ
    In (ರಾಜ್ಯ ) ಜಿಲ್ಲೆ
  • ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರು ಶ್ರಮಿಸಬೇಕು
    In (ರಾಜ್ಯ ) ಜಿಲ್ಲೆ
  • ಆದೇಶ ಹಿಂಪಡೆಯದಿದ್ದರೆ ಬಬಲೇಶ್ವರದಿಂದಲೇ ಹೋರಾಟ
    In (ರಾಜ್ಯ ) ಜಿಲ್ಲೆ
  • ಬರಡೋಲ: ೧೨ ಜನರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಪೊಲೀಸರ ಗುಂಡಿಗೆ ರೌಡಿ ಶೀಟರ್ ಬಲಿ
    In (ರಾಜ್ಯ ) ಜಿಲ್ಲೆ
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.