ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸುವ ಜ್ಞಾನದ ಬೆಳಕನ್ನು ಹೊತ್ತಿಸುವ ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗಲೇ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ನಿವೃತ್ತ ಮುಖ್ಯಗುರು ಎಸ್.ಎಸ್.ಯಂಕಂಚಿ ಹೇಳಿದರು.
ಸಿಂದಗಿ ಪಟ್ಟಣದ ಜ್ಯೋತಿ ನಗರದ ಲಕ್ಷ್ಮಿ ಕಲ್ಯಾಣ ಮಂಟಪ ಸಿಂದಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಆರ್ಯಭಟ ಪ್ರಭಾತ ಪ್ರಾಢ ಶಾಖೆ ವತಿಯಿಂದ ಗುರುಪೂರ್ಣಿಮಾ ನಿಮಿತ್ತ ಹಮ್ಮಿಕೊಂಡ ಗುರು ಉತ್ಸವ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗುರು ಪೂರ್ಣಿಮಾ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಲ್ಲ. ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಮಾರ್ಗದರ್ಶನ ಮಾಡಿದ ಗುರುವನ್ನು ಗೌರವಿಸುವ ದಿನವಾಗಿದೆ. ಇಂದಿನ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಶಿಸ್ತು ಬಹಳ ಅತ್ಯವಶಕ. ರಾಷ್ಟಿçÃಯ ಸ್ವಯಖಸೇವಕ ಸಂಘವು ಮಕ್ಕಳಲ್ಲಿ ಈ ಮೌಲ್ಯಗಳನ್ನು ಬೆಳಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಮ್ಮ ಲೌಕಿಕ ಸಾಧನೆ, ಅಲೌಕಿಕ ಸಿದ್ದಿಗೂ ಕಾರಣವಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಹಬ್ಬವನ್ನಾಗಿ ನಮ್ಮ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ತಾಲೂಕು ಶಾರೀರಿಕ ಪ್ರಮುಖ ಸುನೀಲ ಬಳುಂಡಗಿ, ಅಶೋಕ ಅಲ್ಲಾಪೂರ, ಶ್ರೀಶೈಲ ಯಳಮೇಲಿ, ಬಸನಗೌಡ ಪಾಟೀಲ, ವಿಠ್ಠಲ ಶೀರಶ್ಯಾಡ, ಮಲ್ಲಪ್ಪ ದಮಗೊಂಡ, ರಾಮು ಹೂಗಾರ, ಸುನೀಲ ವಡಾರ, ಶಿವಾನಂದ ನಂದಿಕೋಲಮಠ, ಶೇಖರ ಪಾಟೀಲ, ಶಂಕರಗೌಡ ದೇವಪ್ಪ ರೊಳ್ಳಿ, ಗುರನಗೌಡ ಬಿರಾದಾರ, ಎಸ್.ಎಸ್.ಬಿರಾದಾರ, ಭಗವಂತರಾಯ ಬಸಗೊಂಡ, ಬಸವರಾಜ ಉಪ್ಪಾರ, ಮಂಜು ಹಿರೇಮಠ, ಮುತ್ತುರಾಜ ಯಲಗಟ್ಟಿ, ಎಸ್.ಎಸ್.ಬಿರಾದಾರ, ಬಸವರಾಜ ಹೂಗಾರ, ಅಶೋಕ ಬಿರಾದಾರ, ಕರಿಯಪ್ಪ ಪೂಜಾರಿ, ಬಸವರಾಜ ತಾಳಿಕೋಟಿ, ಅನಿಕೇತ ಕೊಂಡಗೂಳಿ, ರಮೇಶ ಸಿಂದಗಿ, ಕಿರಣಿ ಶಂಬೇವಾಡ, ಮಹಾಂತೇಶ ನೂಲಾನವರ, ಮಲ್ಲು ಮಣಿಕಂಠ ಸೇರಿದಂತೆ ಅನೇಕರು ಇದ್ದರು.