Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕವನದ ಶಿರ್ಷಿಕೆ: ದೇಹ ಬೆತ್ತಲು-ಭಾವ ಬೆತ್ತಲು
ವಿಶೇಷ ಲೇಖನ

ಕವನದ ಶಿರ್ಷಿಕೆ: ದೇಹ ಬೆತ್ತಲು-ಭಾವ ಬೆತ್ತಲು

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವಿವೇಕಾನಂದ. ಎಚ್. ಕೆ.
ಬೆಂಗಳೂರು
ಮೊ: 9844013068

ಉದಯರಶ್ಮಿ ದಿನಪತ್ರಿಕೆ

” ಅರಿವೆಂಬುದು ಬಿಡುಗಡೆ ” ಎಂಬ ಆಶಯದೊಂದಿಗೆ ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ
ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಕೆಲವು ಕವಿಯತ್ರಿಗಳ ಕವನದ ಸಾಲುಗಳು ಒಂದಷ್ಟು ಸಾಮಾಜಿಕ ಜಾಲತಾಣಗಳ ಟ್ರೋಲ್ ಎಂಬ ಸಾಂಕ್ರಾಮಿಕ ಖಾಯಿಲೆಯ ಚರ್ಚಾ ವಸ್ತುವಾದ ಕಾರಣ ಆ ರೋಗಕ್ಕೆ ತುತ್ತಾದ ನನ್ನದೂ ಒಂದು ಅನಿಸಿಕೆ..
ಇದನ್ನು ಕೆಲವರು ಅಪಹಸ್ಯವಾಗಿ, ವ್ಯಂಗ್ಯವಾಗಿ, ತಮಾಷೆಯಾಗಿ, ವಿಚಿತ್ರವಾಗಿ ಇರುವಂತೆ, ಇನ್ನೂ ಕೆಲವರು ಇದೊಂದು ಮಹಿಳಾ ಶೋಷಣೆಯ ಅತ್ಯಂತ ಮುಕ್ತ, ಪರಿಣಾಮಕಾರಿ ಮತ್ತು ಸಹಜ ಅಭಿವ್ಯಕ್ತಿ ಎಂಬಂತೆ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ.


ಅದರಲ್ಲಿ ಬಹು ಮುಖ್ಯವಾಗಿ ಮಮತಾ ಸಾಗರ್ ಅವರ ಮೊಲೆ, ಯೋನಿ, ಕತ್ತಲಕೋಶ ಎಂಬ ಕೆಲವು ಕಾವ್ಯದ ಸಾಲುಗಳು ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಬಹುತೇಕ ಪರ ಮತ್ತು ವಿರೋಧದ ಎರಡು ವಾದಗಳು ಸಮ ಪ್ರಮಾಣದಲ್ಲಿಯೇ ನಡೆಯುತ್ತಿರುವಂತೆ ಕಾಣುತ್ತಿದೆ.
ಇದಕ್ಕೆ ನನ್ನದೊಂದು ಕವಿತೆ..
ಬುದ್ಧ, ಮಹಾವೀರರ ಕಾಲದಲ್ಲಿ ಅಹಿಂಸೆಯ ಬಗ್ಗೆ ಹೆಚ್ಚು ಒತ್ತುಕೊಡಲು ಕಾರಣ ಆಗಿನ ಕಾಲದಲ್ಲಿದ್ದ ಹಿಂಸೆಯೇ ಅಲ್ಲವೇ..?
ರಾಮಾಯಣ, ಮಹಾಭಾರತ ಕಾಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಘರ್ಷಣೆ ಉಂಟಾಗಿ ಒಳ್ಳೆಯದೇ ಜಯಿಸಿ ಕೆಟ್ಟದ್ದು ಸರ್ವನಾಶವಾಗುತ್ತದೆ ಎಂದು ಬಿಂಬಿಸಲು ಕಾರಣ ಆಗಿದ್ದ ಕೆಟ್ಟದ್ದರ ವಿಜೃಂಭಣೆಯ ಇರಬೇಕಲ್ಲವೇ..?
ಬಸವಣ್ಣನವರು ಅಂದು ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ್ದಕ್ಕೆ ಕಾರಣ ಆಗಿದ್ದ ಅತ್ಯಂತ ಅಸಮಾನತೆಯ, ಮನುಷ್ಯ ವಿರೋಧಿ ಸಮಾಜವೇ ಕಾರಣವಾಗಿರಬೇಕು ಹೌದಲ್ಲವೇ..?
ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ದರಿದ್ರ ದೇವೋಭವ ಅಂದರೆ ಬಡವರ ಸೇವೆಯಲ್ಲಿ ದೇವರನ್ನು ಕಾಣು ಎನ್ನಲು ಆಗ ಬಡವರನ್ನು ಅತ್ಯಂತ ತುಚ್ಚವಾಗಿ ಕಾಣುತ್ತಿದ್ದುದೇ ಇರಬೇಕಲ್ಲವೇ..?
ಮಹಾತ್ಮ ಗಾಂಧಿಯವರು ಸತ್ಯದ ಪರವಾಗಿ ಅಷ್ಟೊಂದು ತೀಕ್ಷ್ಣವಾಗಿ ಮಾತನಾಡುತ್ತಾ ಬದುಕಲು ಪ್ರಯತ್ನಿಸುತ್ತಿದ್ದುದು ಆ ಕಾಲದಲ್ಲಿದ್ದ ಅಸತ್ಯದಿಂದಾಗಿಯೇ ಅಲ್ಲವೇ..?
ಬಾಬಾಸಾಹೇಬ್ ಅಂಬೇಡ್ಕರ್ ರವರು ಶೋಷಣೆ, ಅಸ್ಪೃಶ್ಯತೆಯ ವಿರುದ್ಧ ಅಷ್ಟೊಂದು ತೀವ್ರ ಹೋರಾಟ ಮಾಡಲು ಆಗಿದ್ದ ಶೋಷಣೆ ಮತ್ತು ದೌರ್ಜನ್ಯ ತುಂಬಾ ಆಳದಲ್ಲಿ ಇದ್ದುದರಿಂದಲೇ ಅಲ್ಲವೇ..?
ಹಾಗೆಯೇ ಇಂದು ಬಹುತೇಕ ಮಹಿಳಾ ಕ್ರಾಂತಿಕಾರಿ ಮುಕ್ತ ಸಾಹಿತ್ಯ ಪುರುಷ ದೌರ್ಜನ್ಯದ ವಿರುದ್ಧವಾಗಿ, ಅದರಲ್ಲೂ ಮುಖ್ಯವಾಗಿ ತಮ್ಮ ಸ್ತನ, ಯೋನಿ, ನೀತಂಬ ಮುಂತಾದ ದೇಹದ ಅಂಗಗಳೇ ಪುರುಷರ ಮುಖ್ಯ ಕೇಂದ್ರೀಕೃತ ಭಾವಗಳಾಗಿರುವುದರಿಂದ, ಹೆಣ್ಣಿನ ನಿಜವಾದ ವ್ಯಕ್ತಿತ್ವ, ಸ್ವಾತಂತ್ರ್ಯ ಮರೆಯಾಗಿ ಈ ಕ್ಷಣಕ್ಕೂ ಹೆಣ್ಣು ಭೋಗದ ವಸ್ತು ಎಂದು ಬಹುತೇಕ ಪುರುಷರು ಆಂತರಿಕವಾಗಿ ಮತ್ತು ಖಾಸಗಿಯಾಗಿ ವರ್ತಿಸುವುದನ್ನು ಸೂಕ್ಷ್ಮ ಮನಸ್ಸಿನ ಹೆಣ್ಣುಗಳು ಈ ರೀತಿಯ ಕವನಗಳ ಮೂಲಕ ಹೊರ ಹಾಕುತ್ತಿರಬಹುದಲ್ಲವೇ..?
ಅಂದರೆ ಕೌಟುಂಬಿಕ ಜೀವನ ( ಮೊದಲ ರಾತ್ರಿ ) ಪ್ರಾರಂಭವಾಗುವುದೇ ಹೆಣ್ಣನ್ನು ಭೋಗಿಸುವುದರ ಮುಖಾಂತರವೇ ಇರಬಹುದೇ.‌?
ಮದುವೆ ಸಂತಾನಾಭಿವೃದ್ಧಿಗಾಗಿ ಮತ್ತು ಕೌಟುಂಬಿಕ ವ್ಯವಸ್ಥೆಗೆ ಒಂದು ಕಾರಣವಾದರೂ ಮುಖ್ಯ ಕಾರಣ ಹೆಣ್ಣನ್ನು ಅನುಭವಿಸುವುದೇ ಎಂದು ಮಹಿಳೆಯರಿಗೆ ಸಾಮಾನ್ಯವಾಗಿ ಅನಿಸುತ್ತಿರಬಹುದಲ್ಲವೇ..?
ಮಿಲನ ಮಹೋತ್ಸವ ಎಂಬುದು ಸುಖ ಕೊಡುವ, ಸುಖ ಪಡೆಯುವ ಸಮ ಪ್ರಮಾಣದ ಕ್ರಿಯೆ ಎಂಬುದು ಆಡುಭಾಷೆಯಲ್ಲಿ ತಪ್ಪಾಗಿ ಗ್ರಹಿಸಿ ಹೆಣ್ಣಿನ ಮೇಲಿನ ಅಧಿಪತ್ಯ ಮತ್ತು ಪುರುಷತ್ವದ ಪ್ರದರ್ಶನ ಎಂಬ ಭ್ರಮೆ ಹೆಣ್ಣಿನಲ್ಲಿ ಕೀಳರಿಮೆ ಉಂಟಾಗಿ ಈ ರೀತಿಯ ಕವನಗಳಲ್ಲಿ ಅಸಹನೆ ವ್ಯಕ್ತವಾಗುತ್ತಿರಬಹುದಲ್ಲವೇ.‌?
ಅದನ್ನು ಕೆಲವರು ಮುಕ್ತವಾಗಿ ಈ ರೀತಿ ಹೇಳಿಕೊಳ್ಳುತ್ತಿರಬಹುದು ಎಂದೆನಿಸುವುದಿಲ್ಲವೇ..?
ಆ ಕಾರಣಕ್ಕಾಗಿಯೇ ನಾನು ಎಂದರೆ ಕೇವಲ ಮೊಲೆ ಮತ್ತು ಕತ್ತಲೆಯ ಕೋಶ ಎಂದು ಅವರ ಭಾವನೆ ವಾಸ್ತವವೆ ಆಗಿರಬೇಕಲ್ಲವೇ..?
ಇಲ್ಲದಿದ್ದರೆ ಬಹುತೇಕ ಮಹಿಳಾ ಸಾಹಿತ್ಯ ಅಥವಾ ಮಹಿಳಾ ಮುಕ್ತ ಸಾಹಿತ್ಯ ತನ್ನದೇ ದೇಹಗಳ ಅಂಗಾಂಗಗಳ ಸುತ್ತಲೇ ಇರುತ್ತವೆ ಎಂದರೆ ಎಷ್ಟೋ ಹೆಣ್ಣು ಮಕ್ಕಳು ಹೆಣ್ಣೆಂದರೆ ಬರಿ ಗುಪ್ತಾಂಗಗಳು ಮಾತ್ರ ಎಂದು ಪುರುಷ ಸಮಾಜ ಭಾವಿಸಿದೆ ಎಂದು ಆ ಹೆಣ್ಣುಗಳು ಭಾವಿಸಿರಬಹುದಲ್ಲವೇ..?
ಇದನ್ನು ಆತ್ಮವಂಚನೆ ಮಾಡಿಕೊಳ್ಳದೆ ಯೋಚಿಸಬೇಕು.
ಸಾಮಾನ್ಯವಾಗಿ ಪುರುಷರಿಗೆ ಬಹುತೇಕ ಹೆಣ್ಣುಗಳು ಕಾಣುವುದೇ ಒಂದಷ್ಟು ಲೈಂಗಿಕ ಆಕರ್ಷಣೆಯ ಅಂಗಗಳಿಂದಾಗಿಯೇ ಅಲ್ಲವೇ..?
ಮೇಲ್ನೋಟಕ್ಕೆ ಗೌರವ, ಭಕ್ತಿ, ಅಭಿಮಾನ, ನಿರ್ಲಕ್ಷ್ಯ ಕಂಡರೂ ಅಂತರ್ಯದಲ್ಲಿ ಸಾಮಾನ್ಯವಾಗಿ ಲೈಂಗಿಕ ಅಲೆಗಳು ಹೇಳುತ್ತಲೇ ಇರುತ್ತವೆ ಅಲ್ಲವೇ..?
ಇದು ಸ್ತ್ರೀಯರಿಗೂ ಅರ್ಥವಾಗುವ ಕಾರಣದಿಂದಲೇ ಈ ರೀತಿಯ ಕವಿತೆಗಳು ಹೊರಬರುತ್ತಿರಬಹುದಲ್ಲವೇ..?
ಹಾಗೆಯೇ ಮಹಿಳೆಯರ ಮನಸ್ಸು ಕೂಡ ಸಂವೇದನಾಶೀಲತೆಯಿಂದ ತಾನು ಭೋಗದ ವಸ್ತು ಎಂದು ಸಮಾಜ ಪರಿಗಣಿಸಿರುವುದರಿಂದ ಅದನ್ನೇ ನೇರವಾಗಿ ವ್ಯಕ್ತಪಡಿಸೋಣ, ಅದರಲ್ಲಿ ಸಂಕೋಚ ಏಕೆ ಎನ್ನುವ ಮನೋಭಾವ ಅವರಲ್ಲೂ ಇರಬಹುದು ಅಲ್ಲವೇ..?
ಹಾಗೆಂದು ಸಂಪೂರ್ಣ ಮುಕ್ತವಾಗುವುದು, ಭಾವ ಬೆತ್ತಲಾಗುವುದು ಈ ಸಮಾಜದಲ್ಲಿ ಸದ್ಯಕ್ಕೆ ಕಷ್ಟ ಅಲ್ಲವೇ..?
ಅದೊಂದು ತುಂಬಾ ಪ್ರಬುದ್ಧ, ಸಮಚಿತ್ತ, ವಿಶಾಲ ಮನಸ್ಥಿತಿಯಾದ್ದರಿಂದ ಸಾಮಾನ್ಯ ಜನರು ಆಗ ಮಟ್ಟ ತಲುಪುವುದು ಸುಲಭವಾಗಿ ಸಾಧ್ಯವೇ..
ಆದ್ದರಿಂದ ಆ ಕವಿತೆಯ ಬಗ್ಗೆ ಇರುವ ಮೆಚ್ಚುಗೆಯನ್ನು, ಟೀಕೆಯನ್ನು ಸ್ವೀಕರಿಸುತ್ತಾ, ಅವರವರ ಭಾವಕ್ಕೆ ಅವರವರು ಅಭಿಪ್ರಾಯ ವ್ಯಕ್ತಪಡಿಸಲಿ, ಎರಡನ್ನು ಗಮನಿಸೋಣ,
ಈ ಸಮಾಜದಲ್ಲಿ ಇದೇ ಸರಿ ಎನ್ನುವುದು ತುಂಬಾ ಕಷ್ಟವಲ್ಲವೇ..?
ಇದೇನು ಈ ಕ್ಷಣದಲ್ಲೇ ಇತ್ಯರ್ಥವಾಗಬಹುದಾದ ಖಚಿತ ವಿಷಯವೇನು ಅಲ್ಲ ಅಲ್ಲವೇ..?
ಹೀಗೆಯೇ ಅಭಿವ್ಯಕ್ತಿಗಳು ಸಾಗಲಿ ಮುಕ್ತವಾಗಿ, ಬೆತ್ತಲಾಗಿ,
ಏಕೆಂದರೆ ಹೆಣ್ಣು,
ಕೇವಲ ಹೆಂಡತಿ, ಪ್ರೇಯಸಿ, ಬೆಲೆವೆಣ್ಣು ಮಾತ್ರವಲ್ಲ,
ನಮ್ಮ ತಾಯಿ, ತಂಗಿ, ಅಕ್ಕ, ಮಗಳು ಸಹ ಹೌದಲ್ಲವೇ..?
“ಅರಿವೆಂಬುದು ಬಿಡುಗಡೆ‌”
“ನಾನೆಂಬೆನೆ ಅರಿವಿನೆಂಜಲು”

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.